Asianet Suvarna News Asianet Suvarna News

News Hour: ಇಸ್ರೇಲ್ ಹಮಾಸ್‌ ಯುದ್ಧಭೂಮಿಗೆ ದೊಡ್ಡಣ್ಣ ಅಮೆರಿಕ ಎಂಟ್ರಿ!

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧಭೂಮಿಗೆ ಬುಧವಾರ ಅಮೆರಿಕ ಎಂಟ್ರಿಯಾಗಲಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಇಸ್ರೇಲ್‌ಗೆ ಭೇಟಿ ನೀಡಲಿದ್ದು, ಆ ಬಳಿಕ ಜೋರ್ಡನ್‌ಗೂ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.
 

ಬೆಂಗಳೂರು (ಅ.17): ಗಾಜಾಪಟ್ಟಿಯನ್ನು ಇಸ್ರೇಲ್‌ ಆಕ್ರಮಿಸಿಕೊಂಡರೆ ಅದು ಮಹಾಪ್ರಮಾದವಾಗಲಿದೆ ಎಂದು ಅಮೆರಿಕ ಹೇಳಿದ ಬೆನ್ನಲ್ಲಿಯೇ ಅಧ್ಯಕ್ಷ ಜೋ ಬೈಡೆನ್‌ ಬುಧವಾರ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ಬೈಡೆನ್‌ ಜೋರ್ಡನ್‌ ದೇಶಕ್ಕೂ ಭೇಟಿ ನೀಡಲಿದ್ದಾರೆ.

ಇಸ್ರೇಲ್‌ಗೆ ಭೇಟಿ ನೀಡಲಿರುವ ಜೋ ಬೈಡೆನ್‌, ಗಾಜಾಪಟ್ಟಿಯ ಮೇಲೆ ಸಮರ ಸಾರ್ತಾರಾ? ಅಥವಾ ಸಂಧಾನ ನಡೆಸ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಇನ್ನೊಂದೆಡೆ ಇಸ್ರೇಲ್ ಎದುರು ಹಮಾಸ್ ಉಗ್ರರು ಹೊಸ ವರಸೆ ಆರಂಭಿಸಿದ್ದಾರೆ. ಒತ್ತೆಯಾಳು ಬೇಕಾದರಲ್ಲಿ 6 ಸಾವಿರ ಕೈದಿಗಳ ಬಿಡುಗಡೆ ಮಾಡಿ  ಎಂದು ಬೇಡಿಕೆ ಇಟ್ಟಿದೆ. ಆದರೆ, ಉಗ್ರರ ಬೇಡಿಕೆಗೆ ಇಸ್ರೇಲ್ ಪ್ರಧಾನಿ ಕ್ಯಾರೇ ಎಂದಿಲ್ಲ.

News Hour: ಗಾಜಾ ವಶಪಡಿಸಿಕೊಳ್ಳಲು ಸಜ್ಜಾಗಿ ನಿಂತ ಇಸ್ರೇಲ್‌, ನೇರ ಎಚ್ಚರಿಕೆ ನೀಡಿದ ಇರಾನ್‌!

ಇನ್ನೊಂದೆಡೆ, ಇಸ್ರೇಲ್ ಪರ ಅಮೆರಿಕ ನಿಂತಿದ್ದರೆ ಪ್ಯಾಲಿಸ್ತೇನ್ ಬೆನ್ನಿಗೆ ರಷ್ಯಾ  ನಿಂತಿದೆ. ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ವಿಶ್ವಸಂಸ್ಥೆ ಮೊರೆ ಹೋಗಿದ್ದಾರೆ.  ಭದ್ರತಾ ಮಂಡಳಿಯಲ್ಲಿ ಕದನ ವಿರಾಮ ನಿರ್ಣಯ ತಿರಸ್ಕಾರ ಮಾಡಲಾಗಿದೆ.

Video Top Stories