Asianet Suvarna News Asianet Suvarna News

ಕುತಂತ್ರಿ ಚೀನಾಗೆ ತಕ್ಕ ಉತ್ತರ ಕೊಡಲು ಭಾರತೀಯ ಸೇನೆಯ ತಾಕತ್ತು ಹೀಗಿದೆ ನೋಡಿ..!

ಪೂರ್ವ ಲಡಾಖ್ ಬಳಿಯ ಗಲ್ವಾನ್‌ನ ತನ್ನ ಭೂಭಾಗದಲ್ಲಿ  ವ್ಯೂಹಾತ್ಮಕವಾಗಿ ಮಹತ್ವದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಭಾರತ ಕೈಗೆತ್ತಿಕೊಂಡಿದೆ. ಈ ಯೋಜನೆಗೆ ಆಕ್ಷೇಪ ತೆಗೆದು ಚೀನಾ ಮೇ ಮೊದಲ ವಾರದಲ್ಲಿ ಭಾರತೀಯ ಯೋಧರ ಜೊತೆ ಘರ್ಷಣೆ ನಡೆಸಿತ್ತು. 
 

ನವದೆಹಲಿ (ಜೂ. 17): ಪೂರ್ವ ಲಡಾಖ್ ಬಳಿಯ ಗಲ್ವಾನ್‌ನ ತನ್ನ ಭೂಭಾಗದಲ್ಲಿ  ವ್ಯೂಹಾತ್ಮಕವಾಗಿ ಮಹತ್ವದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಭಾರತ ಕೈಗೆತ್ತಿಕೊಂಡಿದೆ. ಈ ಯೋಜನೆಗೆ ಆಕ್ಷೇಪ ತೆಗೆದು ಚೀನಾ ಮೇ ಮೊದಲ ವಾರದಲ್ಲಿ ಭಾರತೀಯ ಯೋಧರ ಜೊತೆ ಘರ್ಷಣೆ ನಡೆಸಿತ್ತು. 

ಭಾರತ ರಸ್ತೆ ನಿರ್ಮಾಣ ಮಾಡುತ್ತಿರುವುದು ಚೀನಾ ಕಣ್ಣು ಕೆಂಪಾಗಿಸಿದೆ.  ಪೂರ್ವ ಲಡಾಖ್‌ನ ಗಲ್ವಾನ್ ಗಡಿಯಲ್ಲಿ ಕಳೆದ ಐದು ವಾರಗಳಿಂದ ಬಿಕ್ಕಟ್ಟು ಏರ್ಪಟ್ಟಿದೆ. ವಿವಾದಿತ ಪ್ರದೇಶದಿಂದ ಹಿಂದೆ ಸರಿಯುವಾಗ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ಕಲ್ಲು, ದೊಣ್ಣೆಗಳಿಂದ ತೀವ್ರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರೆ, ಚೀನಾ 43 ಯೋಧರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. 

ಭಾರತ- ಚೀನಾ ಗಡಿ ಸಂಘರ್ಷ; ಹುತಾತ್ಮರಾದ 20 ಯೋಧರ ಪಟ್ಟಿ ಬಿಡುಗಡೆ

ಯುದ್ಧ ಸನ್ನದ್ಧರಾಗಿ. ಅಗತ್ಯ ಶಸ್ತ್ರಾಸ್ತ್ರಗಳ ಸಿದ್ಧತೆ ಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ಸೇನೆಗೆ ಆದೇಶ ನೀಡಿದೆ.  ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಸಮರ್ಥವಾಗಿದೆ. ಸೇನೆ ಬಲಿಷ್ಠವಾಗಿದೆ. ಭಾರತೀಯ ಸೇನಾ ಶಕ್ತಿ ಏನೆಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ..! 

 

Video Top Stories