ಕವಿಯೂ ಆದರೂ ಪ್ರಧಾನಿ ಮೋದಿ..! ಗಾರ್ಬೋ ನೃತ್ಯಕ್ಕಾಗಿ ಮೋದಿ ಬರೆದ್ರು ಸ್ಪೆಷಲ್ ಸಾಹಿತ್ಯ..!
ಮೋದಿಯಿಂದ ತಯಾರಾದ ಗಾರ್ಬೋ ಹಾಡು
ಧ್ವನಿ ಭಾನುಶಾಲಿ ಟ್ವೀಟ್‌ಗೆ ಮೋದಿ ಪ್ರತಿಕ್ರಿಯೆ
ದಸರಾದಂದೇ ಗಾರ್ಬೋ ಹಾಡು ರಿಲೀಸ್ ಏಕೆ?
ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಕವಿತೆಯೊಂದನ್ನು ಬರೆದಿದ್ದರು. ಈಗ ಈ ಹಾಡು ವಿಜಯದಶಮಿಯ ಈ ಸಂಭ್ರಮದಲ್ಲಿ ನವರಾತ್ರಿ ವೈಭವವಾಗಿ ಮೂಡಿ ಬಂದಿದೆ. ಮೋದಿ ಬರೆದ ಕವಿತೆ ಈಗ ಸುಂದರ ಹಾಡಾಗಿ ಲೋಕಾರ್ಪಣೆಯಾಗಿದೆ. ಗುಜರಾತಿ ಭಾಷೆಯ ಈ ಗಾರ್ಬೊ ಹಾಡು ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ. ಈ ವರ್ಷದ ದಸರಾ ಹಬ್ಬಕ್ಕೆ(Dasara festival), ಪ್ರಧಾನಿ ನರೇಂದ್ರ ಮೋದಿಯಿಂದ(Narendra modi) ಗುಜರಾತಿಗರಿಗೆ ನವರಾತ್ರಿ ಗಿಫ್ಟ್ ಸಿಕ್ಕಿದೆ. ಈ ಹಾಡನ್ನು ಗುಜರಾತಿ ಭಾಷೆಯಲ್ಲಿ ಗಾರ್ಬೋ ಎಂದು ಕರೆಯಲಾಗುತ್ತೆ. ಈ ಹಾಡಿನ ಲಿರಿಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಬರೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಬರೆದಿರುವ ಗಾರ್ಬೋ(Garbo) ಕವಿತೆಯ ಸಾಲುಗಳು ಇಂದು ಸುಂದರ ಹಾಡಾಗಿ ಮೂಡಿ ಬಂದಿದೆ. ಹಲವು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಅವ್ರು ಈ ಗಾರ್ಬೋ ಕವಿತೆಯನ್ನು ಬರೆದಿದ್ದರು. ಈ ಕವಿತೆ ಆಗ ಪ್ರಿಂಟ್ ಕೂಡ ಆಗಿತ್ತು. ಈಗ ಮೋದಿ ಬರೆದಿರುವ ಈ ಗಾರ್ಬೋ ಹಾಡನ್ನು, ಖ್ಯಾತ ಸಂಗೀತಗಾರ ಜಾಕಿ ಭಗ್ನಾನಿ ಅವರು ಸುಂದರ ಸಂಗೀತು ಸಂಯೋಜನೆ ಮಾಡಿದ್ದಾರೆ. ಜಾಕಿ ಭಗ್ನಾನಿ ಗಾರ್ಬೋ ಕವಿತೆಗೆ ಅತ್ಯಂತ ಸುಂದರವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆನೇ ಗುಜರಾತ್‌ನ ಫೇಮಸ್ ಲೆಡಿ ಸಿಂಗರ್ ಧ್ವನಿ ಭಾನುಶಾಲಿ ನಿಮಗೆಲ್ಲ ಗೊತ್ತಿರಬಹುದು. ಧ್ವನಿ ಭಾನುಶಾಲಿ ಇವರೇ ನೋಡಿ. ಇವರು ಗುಜರಾತ್ನ ಪಾಫುಲರ್ ಲೇಡಿ ಸಿಂಗರ್. ಇವರು ಹಾಡಿದ ಹಾಡಿಗೆ, ಇಂಪಾದ ಧ್ವನಿಗೆ ಅದೆಷ್ಟೋ ಗುಜರಾತಿಗರು ಹುಚ್ಚರಾಗಿದ್ದಾರೆ. ಇಷ್ಟೊಂದು ಫೇಮಸ್ ಸಿಂಗರ್ ಧ್ವನಿ ಭಾನುಶಾಲಿ ಈ ಗಾರ್ಬೋ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಧ್ವನಿಯವರ ಇಂಪಾದ ಧ್ವನಿಗೆ ಕೇಳುಗರು ಫಿದಾ ಆಗಿದ್ದಾರೆ.
ಇದನ್ನೂ ವೀಕ್ಷಿಸಿ: ಟ್ಯಾಂಕರ್‌ಗಳ ಧೂಳಿನಿಂದ ಆವರಿಸಿದ ಇಸ್ರೇಲ್ ಗಡಿ: 7 ಪೊಲೀಸರ ಎದೆ ಸೀಳಿಸಿದ ಉಗ್ರರ ಗುಂಡು