Asianet Suvarna News Asianet Suvarna News

ಅತಿಕ್ರಮಣದ ಕಾಲ ಮುಗೀತು, ಇದು ಅಭಿವೃದ್ಧಿಯ ಯುಗ; ಇದು ನಮೋ ಮಾತಿನ ಮರ್ಮ!

ಕಳೆದ 22 ದಿನಗಳಿಂದ ಸಮರ ಸದೃಶ ವಾತಾವರಣ ನಿರ್ಮಾಣವಾಗಿರುವ ಭಾರತ- ಚೀನಾ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಚ್ಚರಿಯ ಭೇಟಿ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಅತಿಕ್ರಮಣ ಮನಸ್ಥಿತಿ ತೋರುತ್ತಿರುವ ಚೀನಾಕ್ಕೆ ಖಡಕ್‌ ಎಚ್ಚರಿಕೆ ನೀಡಿರುವ ಅವರು, ಅಂತಹ ಕಾಲವೆಲ್ಲಾ ಮುಗಿದುಹೋಗಿದೆ. ಭಾರತ ಬದಲಾಗಿದೆ. ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. 

ನವದೆಹಲಿ (ಜು. 05): ಕಳೆದ 22 ದಿನಗಳಿಂದ ಸಮರ ಸದೃಶ ವಾತಾವರಣ ನಿರ್ಮಾಣವಾಗಿರುವ ಭಾರತ- ಚೀನಾ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಚ್ಚರಿಯ ಭೇಟಿ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಅತಿಕ್ರಮಣ ಮನಸ್ಥಿತಿ ತೋರುತ್ತಿರುವ ಚೀನಾಕ್ಕೆ ಖಡಕ್‌ ಎಚ್ಚರಿಕೆ ನೀಡಿರುವ ಅವರು, ಅಂತಹ ಕಾಲವೆಲ್ಲಾ ಮುಗಿದುಹೋಗಿದೆ. ಭಾರತ ಬದಲಾಗಿದೆ. ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ, ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಯೋಧರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದಾರೆ.

ಲಡಾಖ್ ಗಡಿಯಲ್ಲಿ ಮೋದಿ ಅಬ್ಬರ, ಭಾರತ ಮಾತೆಯ ವೈರಿಗಳಿಗೆ ಚಳಿಜ್ವರ

ದೈತ್ಯ ಹಾಗೂ ಕುತಂತ್ರ ಬುದ್ಧಿಯ ಚೀನಾ ಎದುರು ದಶಕಗಳ ಕಾಲ ಶಾಂತಿ ಮಂತ್ರ ಜಪಿಸಿಕೊಂಡೇ ಬಂದಿದ್ದ ಭಾರತದ ಪ್ರಧಾನಿಯೊಬ್ಬರು ಗಡಿಗೇ ಹೋಗಿ ಆ ದೇಶಕ್ಕೆ ಎಚ್ಚರಿಕೆ ನೀಡಿರುವುದು ಸ್ವಾತಂತ್ರ್ಯಾನಂತರ ಇತಿಹಾಸದಲ್ಲಿ ಇದೇ ಮೊದಲು. ಹೀಗಾಗಿ ಈ ಬೆಳವಣಿಗೆ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಚೀನಾ ವಿಷಯದಲ್ಲಿ ಭಾರತ ಮುಂದಿನ ದಿನಗಳಲ್ಲಿ ವ್ಯವಹರಿಸುವ ರೀತಿಯೇ ಬೇರೆ ಇರಲಿದೆ ಎಂಬುದರ ಸುಳಿವಿತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!