Asianet Suvarna News Asianet Suvarna News

ದೋಸ್ತ್ ದೋಸ್ತ್ ಎಂದು ಒಳಗೊಳಗೆ ತಾಲಿಬಾನ್ ವಿರುದ್ಧ ಮಸಲತ್ತು ಮಾಡಿತಾ ಪಾಕಿಸ್ತಾನ್.?

Sep 16, 2021, 5:20 PM IST

ತಾಲಿಬಾನ್ ಒಳಗೊಳಗೆ ಎರಡು ಭಾಗವಾಗಿದೆಯಾ ಎಂಬ ಅನುಮಾನ ಎದ್ದಿದೆ. ಇತ್ತೀಚಿಗೆ ಲೀಕ್ ಆದ ಆಡಿಯೋವೊಂದು ಈ ಪ್ರಶ್ನೆಯನ್ನು ಹುಟ್ಟು ಹಾಕಿದೆ. 'ನಾವೆಲ್ಲಾ ಪಾಕಿಸ್ತಾನವನ್ನು ನಂಬಿ ಕೆಟ್ಟು ಹೋದೆವು. ಪಾಕ್ ಹೇಳಿದ್ದ ಮಾತನ್ನೆಲ್ಲಾ ಕಣ್ಣು ಮುಚ್ಚಿ ನಂಬಿ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹಾಳು ಮಾಡಿಕೊಂಡೆವು. ಅವರು ಜಗತ್ತಿನ ಮುಂದೆ ಬೆತ್ತಲಾಗಿಸಿದ್ರು. ಮಾನ ಮರ್ಯಾದೆಯನ್ನು ಹರಾಜು ಹಾಕಿದ್ರು. ನಮಗೆ ಭವಿಷ್ಯವೇ ಇಲ್ಲದಂತೆ ಮಾಡಿ ಬಿಟ್ರು' ಎಂದು ನಿಯೋಜಿತ ಉಪರಕ್ಷಣಾ ಸಚಿವ ಹೇಳಿದ್ದಾರೆ. ಇಷ್ಟಕ್ಕೂ ತಾಲಿಬಾನ್, ಪಾಕ್ ವಿರುದ್ಧ ಇಂತಹ ಮಾತನ್ನೇಕೆ ಹೇಳಿತು..? ಇಲ್ಲಿದೆ ಕಾರಣ. 

ಒಂದೊತ್ತಿನ ಊಟಕ್ಕೂ ಹಾಹಾಕಾರ, ಖಜಾನೆಯಲ್ಲಿ ಹಣವಿಲ್ಲ: ಅಫ್ಘಾನ್ ನಾಗರೀಕರ ಸ್ಥಿತಿ ಹರೋಹರ!