Asianet Suvarna News Asianet Suvarna News

ಮೋದಿ ಪಟ್ಟಿಗೆ ಪತರುಗುಟ್ಟಿದೆ ಚೀನಾ; ಬಿದ್ದು ಹೋಗುತ್ತಾ ಚೀನಾ ಆರ್ಥಿಕತೆ?

ಗಲ್ವಾನ್‌ ಕಣಿವೆಯಲ್ಲಿ ತನ್ನ 20 ಯೋಧರ ಹತ್ಯೆ ಮಾಡಿದ ಚೀನಾ ಯೋಧರಿಗೆ ಸ್ಥಳದಲ್ಲೇ ಪಾಠ ಕಲಿಸಿದ್ದ ಭಾರತ, ಇದೀಗ ಚೀನಾದ ಟಿಕ್‌ ಟಾಕ್‌, ಶೇರ್‌ ಇಟ್‌ನಂತಹ ಹಲವು ಆ್ಯಪ್‌ಗಳು ಸೇರಿದಂತೆ 59 ವಿದೇಶಿ ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. 

ಬೆಂಗಳೂರು (ಜು. 01): ಗಲ್ವಾನ್‌ ಕಣಿವೆಯಲ್ಲಿ ತನ್ನ 20 ಯೋಧರ ಹತ್ಯೆ ಮಾಡಿದ ಚೀನಾ ಯೋಧರಿಗೆ ಸ್ಥಳದಲ್ಲೇ ಪಾಠ ಕಲಿಸಿದ್ದ ಭಾರತ, ಇದೀಗ ಚೀನಾದ ಟಿಕ್‌ ಟಾಕ್‌, ಶೇರ್‌ ಇಟ್‌ನಂತಹ ಹಲವು ಆ್ಯಪ್‌ಗಳು ಸೇರಿದಂತೆ 59 ವಿದೇಶಿ ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಆ್ಯಪ್‌ಗಳಿಂದ ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ಆರೋಪ ಕೇಳಿಬಂದ ಕಾರಣ ನೀಡಿ ಈ ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಈ ಆ್ಯಪ್‌ಗಳು ಎಂದಿನಿಂದ ಬಳಕೆಗೆ ಅಥವಾ ಡೌನ್‌ಲೋಡ್‌ಗೆ ನಿಷೇಧ ಆಗಲಿದೆ ಎಂಬುದರ ಕುರಿತು ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಮಾಹಿತಿ ನೀಡಿಲ್ಲ.

ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

ಸೋಮವಾರ ಸಂಜೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಕುರಿತಂತೆ ಆದೇಶ ಹೊರಡಿಸಿದೆ. ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆ ವಿಚಾರದಲ್ಲಿ ಇವು ಪೂರ್ವಾಗ್ರಹಪೀಡಿತವಾಗಿ ಕೆಲಸ ಮಾಡುತ್ತಿದ್ದವು. ಇವುಗಳಿಂದ 130 ಕೋಟಿ ಜನರ ‘ದತ್ತಾಂಶ ಭದ್ರತೆ’ ಹಾಗೂ ‘ಖಾಸಗಿತನ’ಕ್ಕೆ ಬೆದರಿಕೆ ಇತ್ತು ಎಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಭಾರತ ಸರ್ಕಾರದ ಈ ಆರ್ಥಿಕ ಗದಾಪ್ರಹಾರ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ಆರ್ಥಿಕ ಯುದ್ಧಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
 

Video Top Stories