ಕಾರವಾರ ಅತಿರಥರ ಅಖಾಡ:ರೂಪಾಲಿ ಎದುರು ನಿಲ್ಲೋದು ಸೈಲ್..? ಅಸ್ನೋಟಿಕರ್..?
2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್ ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಕಾರವಾರ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಮಾಡಲಾಗಿದೆ.
ಕರಾವಳಿ ಮತ್ತು ಮಲೆನಾಡು ಎರಡು ಇರುವ ಜಿಲ್ಲೆ ಉತ್ತರ ಕನ್ನಡ. ಘಟ್ಟದ ಮೇಲಿನ ಪಾಲಿಟಿಕ್ಸ್ ಮತ್ತು ಘಟ್ಟದ ಕೆಳಗಿನ ಪಾಲಿಟಿಕ್ಸ್ ಬೇರೆ ಬೇರೆ. 2018ರಲ್ಲಿ 6 ಕ್ಷೇತ್ರದಲ್ಲಿ 4 ಕ್ಷೇತ್ರ ಬಿಜೆಪಿ ಗೆದ್ದಿದೆ. ಹಳಿಯಾಳ ಮತ್ತು ಯಲ್ಲಾಪುರದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಇನ್ನು 2008ರಲ್ಲಿ ಗೆದ್ದಿದ್ದ ಆನಂದ್ ಅಸ್ನೋಟಿಕರ್ ಸತತ ಸುದ್ದಿಯಲ್ಲಿದ್ದರು. 2013 ರಲ್ಲಿ ಕಾಂಗ್ರೆಸ್‌ನಿಂದ ಸತೀಶ್ ಸೈಲ್ ಗೆದ್ದು ನಂತರ ಜೈಲಿಗೆ ಹೋಗಿ ಸುದ್ದಿಯಲ್ಲಿದ್ದವರು. ಇನ್ನು 2018 ರಲ್ಲಿ ಬಿಜೆಪಿಯಿಂದ ರೂಪಾಲಿ ನಾಯಕ್ ಗೆದ್ದು ಐದು ವರ್ಷಗಳಿಂದ ಸುದ್ದಿಯಲ್ಲಿದ್ದಾರೆ. ಈಗ ರೂಪಾಲಿ ಎದುರು ನಿಲ್ಲೋದು ಸೈಲ್..? ಅಸ್ನೋಟಿಕರ್..? ಕಾರವಾರದಲ್ಲಿ ಕರಾಮತ್ತು ಮಾಡೋ ಅಭ್ಯರ್ಥಿ ಯಾರು..?ರೂಪಾಲಿ ನಾಯ್ಕ್ ಸೋಲಿಸೋಕೆ ಸಿದ್ಧವಾಗಿರೋ ವ್ಯೂವ ಎಂಥದ್ದು..? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ...