Asianet Suvarna News Asianet Suvarna News

Zee Picchar: ಜೀ  ಪಿಕ್ಚರ್‌ಗೆ ಎರಡನೇ ವರ್ಷದ ಸಂಭ್ರಮ..

* ಜನ ಮನ ಗೆದ್ದ ಜೀ ಪಿಕ್ಚರ್ ಗೆ ಎರಡು ವರ್ಷದ ಸಂಭ್ರಮ
* ಕನ್ನಡಿಗರ ಅಭಿಮಾನದ ಹಾದಿಯಲ್ಲಿ ಪ್ರಯಾಣ
* ಲಾಕ್ ಡೌನ್ ಟೈಮಲ್ಲಿ ಭರಪೂರ ಮನರಮಜೆ ನೀಡಿದ ವಾಹಿನಿ 

ಬೆಂಗಳೂರು(ಮೇ. 02)  ರಾಜನ ಹಿಂದೆಯೆ ರಾಜ ಬೀದಿಯಲ್ಲಿ ನಡೆದ್ರೆ ರಾಜ ಮರ್ಯಾದೆನೇ ಸಿಗುತ್ತೆ, ಅನ್ನೋದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ಜೀ ಪಿಚ್ಚರ್ (ZEE Picchar) ಕನ್ನಡಿಗರ ಪ್ರೀತಿ ಅಭಿಮಾನದ ಹಾದಿಯಲ್ಲಿ ಸಾಗುತ್ತಿರುವ ಜೀ ಕನ್ನಡದ ಕೈ ಹಿಡಿದು ನಡೆಯುತ್ತಿರುವ ಜೀ ಪಿಚ್ಚರ್ ಇದೀಗ ತನ್ನ ಎರಡನೇ ವರ್ಷದ (2nd year anniversary) ಹುಟ್ಟುಬ್ಬವನ್ನು ಆಚರಿಸಿಕೊಳ್ಳುತ್ತಿದೆ.

ಕನ್ನಡದ (Kannada) ಎಂಟರ್‌ಟೈನ್‌ಮೆಂಟ್‌ ಇಂಡಸ್ಟ್ರಿಯ ನಂ.1 ಪಟ್ಟದಲ್ಲಿ ಪಡೆದ ದಿನದಿಂದ ಇಂದಿನವರೆಗೂ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಜೀ ಕನ್ನಡದ ಹೆಮ್ಮೆಯ ಭಾಗವಾಗಿದೆ ಜೀ ಪಿಚ್ಚರ್. ಶುರುವಿನಲ್ಲೇ ಭರ್ಜರಿ 12 ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌, ದಿನಕ್ಕೊಂದು ಒನ್‌ ಬ್ರೇಕ್‌ ಪಿಚ್ಚರ್‌ಗಳ ಮೂಲಕ ನಂ.2 ಸ್ಥಾನಕ್ಕೇರಿ ಇಂದಿಗೂ ಕನ್ನಡಿಗರ ಮನದಲ್ಲಿ  ಅಚ್ಚಳಿಯದ ಹೆಸರಾಗಿ ಉಳಿದು ಬಿಟ್ಟಿದೆ.

ಲಾಕ್‌ಡೌನ್‌ ಟೈಮ್‌ನಲ್ಲಿ ಕನ್ನಡಿಗರು ಹೆಚ್ಚು ಇಷ್ಟ ಪಟ್ಟು ನೋಡಿದ ಪಿಚ್ಚರ್‌ ಚಾನೆಲ್‌ ವೀಕ್ಷಕರ ಅಭಿರುಚಿಯ ತಕ್ಕಂತ ಪಿಚ್ಚರ್ ಗಳನ್ನು ನೀಡುತ್ತಾ ಪ್ರತಿ ಮನೆಯ ಸಂಬಂಧಗಳನ್ನು ಸಂಭ್ರಮಿಸುವ , ಬಂಧಗಳನ್ನ ಬಿಗಿಯಾಗಿಸುವ ಮಹತ್ವದ ಕಾರ್ಯ ಮಾಡಿದೆ. ಪ್ರತಿ ಪಿಚ್ಚರ್‌ಅನ್ನೂ ಭಿನ್ನ ಭಿನ್ನ ರೂಪದಲ್ಲಿ ನೋಡುಗರ ಮನೆಗೆ ತಲುಪಿಸಿ, ಮತ್ತೆ ಮತ್ತೆ ಕನ್ನಡದ ಬೆಸ್ಟ್‌ ಪಿಚ್ಚರ್‌ಗಳನ್ನ ನೋಡುವಂತೆ ಮಾಡಿದ ಹಿರಿಮೆ ಜೀ ಪಿಚ್ಚರ್‌ ನದ್ದು.

ವರನಟ ಡಾ.ರಾಜ್‌ಕುಮಾರ್‌ ರ ಕಪ್ಪು ಬಿಳುಪು ಸಿನಿಮಾಗಳ ಸಾಮ್ರಾಜ್ಯದಿಂದ ಹಿಡಿದು, ಇತ್ತಿಚೆಗೆ ತೆರೆಗೆ ಬಂದ ಬ್ಲಾಕ್‌ ಬಸ್ಟರ್‌ ಹಾಗೂ ಹೊಸಬರ ಬೆಸ್ಟ್‌ ಪ್ರಯತ್ನಗಳನ್ನ ಜನರಿಗೆ ತಲುಪಿಸಿ, ತನ್ನ ಮನರಂಜನೆಯ ವ್ಯಾಪ್ತಿ ಎಷ್ಟು ವಿಶಾಲವಾಗಿದೆ ಅನ್ನೋದನ್ನ ತೋರಿಸಿಕೊಟ್ಟಿದೆ ಜೀ ಪಿಚ್ಚರ್‌.   ಕನ್ನಡಿಗರ ನೆಚ್ಚಿನ ವಾಹಿನಿ ಜೀ-ಕನ್ನಡ, ಹೆಮ್ಮೆಯಿಂದ ಕನ್ನಡ ಸಿನಿರಸಿಕರಿಗಾಗಿ ನೀಡಿದ  ಅಪ್ಪಟ ಪಿಚ್ಚರ್‌ಗಳ ವಾಹಿನಿ ʻಜೀ ಪಿಚ್ಚರ್‌ʼ 2020 ಮಾರ್ಚ್‌ 1ನೇ ತಾರೀಖು ಪ್ರಸಾರ ಆರಂಭಿಸಿತ್ತು. 

Video Top Stories