QR Code ಸ್ಕ್ಯಾನ್ ಮಾಡೋ ಮುನ್ನ ಎಚ್ಚರ: ಯಾಮಾರಿದ್ರೆ ಖಾತೆಯಲ್ಲಿರೋ ಹಣವೆಲ್ಲ ಖಾಲಿ!
*ಸೈನಿಕರ ಹೆಸರಲ್ಲಿ ಸೈಬರ್ ಕಳ್ಳರು ಕಳ್ಳಾಟವಾಡುತ್ತಿರುವ ಪ್ರಕರಣಗಳು
*ದೊಡ್ಡ ದೊಡ್ಡ ಟ್ರೇಡರ್ಸ್, ಹೋಲ್ ಸೇಲ್ ವ್ಯಾಪಾರಿಗಳೇ ಟಾರ್ಗೆಟ್
*ಸೈಬರ್ ಕಳ್ಳರಿಂದ QR ಕೋಡ್ ಬಳಸಿ ವ್ಯಾಪಾರಸ್ಥರಿಗೆ ಉಂಡೆನಾಮ
*ಕೇವಲ 1 ರೂ. ಅಲ್ವಾ ಅಂತ ಹಾಕೋಕೆ ಹೋಗ್ಬೇಡಿ... ಹುಷಾರ್!
*ಯಾಮಾರಿದ್ರೆ ಅಕೌಂಟ್ ಹ್ಯಾಕ್, ಖಾತೆಯಲ್ಲಿರೋ ಹಣವೆಲ್ಲ ಖಾಲಿ!
ವಿಜಯಪುರ (ಮಾ. 02): ವಿಜಯಪುರದಲ್ಲಿ ಸೈನಿಕರ ಹೆಸ್ರಲ್ಲಿ ವಂಚನೆಗೆ ಯತ್ನಿಸಿರೋದು ಬೆಳಕಿಗೆ ಬಂದಿದೆ. ಈಗೆಲ್ಲಾ ವ್ಯಾಪಾರಸ್ಥರು, ಗ್ರಾಹಕರು ಫೋನ್ ಪೇ , ಗೂಗಲ್ ಪೇ ಸೇರಿದಂತೆ ಆನ್ ಲೈನ್ ವಹಿವಾಟು ಮಾಡ್ತಾರೆ. ಇದನ್ನೇ ಈಗ ನಕಲಿ ಸೈನಿಕರು ಟೆಕ್ನಾಲಾಜಿ ಬಳಸಿಕೊಂಡು ವ್ಯಾಪಾರಸ್ಥರಿಗೆ ಉಂಡೆನಾಮ ಹಾಕಲು ಹೊರಟಿದ್ದಾರೆ. ಇಷ್ಟು ದಿನ ರಾಜಕಾರಣಿಗಳು, ಪೊಲೀಸ್ ಆಫೀಸರ್ಸ್ ಹೆಸ್ರಲ್ಲಿ ಹಣ ಕೇಳ್ತಿದ್ರು. ಇದೀಗ ದೇಶ ಕಾಯುವ ಯೋಧರ ಹೆಸ್ರಲ್ಲಿ, ಸೈನಿಕ ಶಾಲೆಯಲ್ಲಿರೋ ಕಮಾಂಡರ್ ಹೆಸ್ರಲ್ಲಿ ಸೈಬರ್ ವಂಚಕರು ಸ್ಕೆಚ್ ಹಾಕ್ತಿದ್ದಾರೆ. ಇವ್ರಿಗೆ ಈಗ ದೊಡ್ಡ ದೊಡ್ಡ ಟ್ರೇಡರ್ಸ್, ಹೋಲ್ ಸೇಲ್ ವ್ಯಾಪಾರಿಗಳೇ ಟಾರ್ಗೆಟ್ ಆಗಿದ್ದಾರೆ.
ಯಾಕಂದ್ರೆ ಟ್ರೇಡರ್ಸ್ ಅಕೌಂಟ್ ನಲ್ಲಿ ಲಕ್ಷಾಂತರ ಹಣ ಇರುತ್ತೆ. ಸಲೀಸಾಗಿ ಎಗರಿಸಬಹುದು ಅಂದುಕೊಂಡಿದ್ದಾರೆ. ಅಂದಹಾಗೆ ವಿಜಯಪುರದಲ್ಲಿ ಸೈನಿಕ ಶಾಲೆಯಿದೆ. ಈ ಶಾಲೆಯಲ್ಲಿ ಅನಿಲ್ ಕುಮಾರ್ ಹೆಸ್ರಲ್ಲಿ ಕಮಾಂಡರ್ ಇದ್ದೀನಿ ಅಂತ ಹೇಳಿ ವಿಜಯಪುರ ನಗರದ ಶಾಪೇಟೆಯಲ್ಲಿರೋ ಶ್ರೀನಂದಿ ಟ್ರೇಡರ್ಸ್ ಮಾಲೀಕ ಶಶಿ ಮೆಳ್ಳಿ ವಂಚನೆಗೆ ಯತ್ನ ನಡೆದಿದೆ.
ಇದನ್ನೂ ಓದಿ: UPI payment fraud ಹಣ ಪಾವತಿ ಸೇರಿ ಡಿಜಿಟಲ್ ವಹಿವಾಟು ಸುರಕ್ಷಿತವಾಗಿಸುವುದು ಹೇಗೆ? ಇಲ್ಲಿವೆ ಟಿಪ್ಸ್!
ನಕಲಿ ಸೈನಿಕ ಅನಿಲ್ ಕುಮಾರ್ ಅಂತ ಕರೆ ಮಾಡಿ 7200 ರೂ ಮೌಲ್ಯದ ಕೆಪಿಎಲ್ ಎಣ್ಣೆ ಆರ್ಡರ್ ಮಾಡಿದ್ದಾರೆ. ಆರ್ಡರ್ ಸಮೇತ ಸೈನಿಕ ಶಾಲೆ ಬಳಿ ಹೋದಾಗ ಖದೀಮರು ವಾಟ್ಸಾಪ್ ಗೆ ARMY CHECK 1 ಹೆಸ್ರಲ್ಲಿರೋ ಒಂದು QR CODE ಕಳಿಸಿದ್ದಾರೆ. ಇದನ್ನ ಸ್ಕ್ಯಾನ್ ಮಾಡಿ 1 Rupee ಕಳುಹಿಸಿ, ಅದೆ ಅಕೌಂಟ್ ಗೆ 7200 ರು, ಹಾಕ್ತೀವಿ ಅಂದಿದ್ದಾರೆ.
ಆದ್ರೆ ಶಶಿ ಇದಕ್ಕೆ ಒಪ್ಪಿಲ್ಲ. ನೀವೆಲ್ಲಿದ್ದೀರಿ ಹೇಳಿ ಅಲ್ಲೆ ಬಂದು ಕೊಬ್ಬರಿ ಎಣ್ಣೆ ತಲುಪಿಸ್ತೀನಿ ಎಂದಿದ್ದಾನೆ. ಜೊತೆಗೆ ಸೈನಿಕ ಶಾಲೆ ಹತ್ತಿರವಿದ್ದ ಸೈನಿಕ ಶಾಲೆಯ ಸಿಬ್ಬಂದಿ ಬಳಿ ಅನಿಲ್ ಕುಮಾರ್ ಹೆಸ್ರಿನ ಸೈನಿಕ ಇದ್ದಾರಾ ಅಂತ ವಿಚಾರಿಸಿದಾಗ ಆ ರೀತಿ ಯಾರು ಇಲ್ಲವೆಂದಾಗ ವಂಚನೆ ಯತ್ನ ಬಯಲಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ