ವನ್ಯಜೀವಿ ಸಂರಕ್ಷಣಾ ಅಭಿಯಾನ: ಭದ್ರಾ ಹುಲಿ ಸಂರಕ್ಷಿತಾರಣ್ಯ ವಲಯದಲ್ಲಿ ಜನಜಾಗೃತಿ ಕಾರ್ಯಕ್ರಮ

ಏಷ್ಯಾನೆಟ್‌ ಸುವರ್ಣನ್ಯೂಸ್‌- ಕನ್ನಡಪ್ರಭ  ವತಿಯಿಂದ ನಡೆಯುತ್ತಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಜನಜಾಗೃತಿ ಕಾರ್ಯಕ್ರಮ ಭದ್ರಾ ಹುಲಿ ಸಂರಕ್ಷಿತಾರಣ್ಯ ವಲಯದಲ್ಲಿ ನಡೆಯಿತು. 

First Published Mar 30, 2023, 8:23 PM IST | Last Updated Mar 30, 2023, 8:23 PM IST

ತರೀಕೆರೆ (ಮಾ.30): ಏಷ್ಯಾನೆಟ್‌ ಸುವರ್ಣನ್ಯೂಸ್‌- ಕನ್ನಡಪ್ರಭ  ವತಿಯಿಂದ ನಡೆಯುತ್ತಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ಜನಜಾಗೃತಿ ಕಾರ್ಯಕ್ರಮ ಭದ್ರಾ ಹುಲಿ ಸಂರಕ್ಷಿತಾರಣ್ಯ ವಲಯದಲ್ಲಿ ನಡೆಯಿತು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಹುಲಿ ಸಂರಕ್ಷಿತ ದಟ್ಟಾರಣ್ಯ ಪ್ರದೇಶಗಳಾದ ಭದ್ರಾ ಅಭಯಾರಣ್ಯ, ಲಕ್ಕವಳ್ಳಿ ಅರಣ್ಯ, ಹೆಬ್ಬೆ ಅರಣ್ಯ, ಮುತ್ತೋಡಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 40 ಕಿ.ಮಿ.ಪ್ರವಾಸ ಮಾಡಿದರು. ಬಳಿಕ, ಮುತ್ತೋಡಿ ಭದ್ರಾ ವನ್ಯಜೀವಿ ವಲಯ ಕಚೇರಿ ಬಳಿ ಅರಣ್ಯಾಧಿಕಾರಿಗಳ ಜೊತೆ ಸಂವಾದ ನಡೆಸಿದರು. 

ಕಾಡಿನ ಸಮಸ್ಯೆ, ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯಾಧಿಕಾರಿಗಳ ಕಷ್ಟ-ಸುಖಗಳ ಕುರಿತು ಪ್ರಕೃತಿ ನಡುವೆ ಅರಣ್ಯಾಧಿಕಾರಿಗಳೊಂದಿಗೆ ನಡೆಯುತ್ತಿರುವ ಸಂವಾದ ತಮಗೆ ಹೆಚ್ಚು ಸಂತೋಷ ತಂದುಕೊಟ್ಟಿದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಹಮ್ಮಿಕೊಂಡಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ, ‘ಕಾಂತಾರ’ ಖ್ಯಾತಿಯ ನಟ, ನಿರ್ದೇಶಕ ರಿಷಬ್‌ ಶೆಟ್ಟಿಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ‘ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮಾತನಾಡಿ, ಖ್ಯಾತ ಚಲನಚಿತ್ರ ನಟ, ನಿರ್ಮಾಪಕರಾದ ರಿಷಬ್‌ ಶೆಟ್ಟಿಅವರು ‘ಕಾಂತಾರ’ ಚಲನಚಿತ್ರದಲ್ಲಿ ಅರಣ್ಯವನ್ನು ದೇವರೆಂದು ತೋರಿಸಿದ್ದಾರೆ. ಅರಣ್ಯಕ್ಕೆ ಬೆಂಕಿ ಹಾಕಬಾರದು ಎಂದು ಸಿನಿಮಾ ಮತ್ತು ಮಾಧ್ಯಮದ ಮೂಲಕ ಹೆಚ್ಚು ಪ್ರಚಾರ ಮಾಡಲಾಗುವುದು. ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

Video Top Stories