'ಈ ಸಮಯದಲ್ಲಿ ಫೀಸ್ ಕಟ್ಟಲು ಅಪ್ಪನ ಬಳಿ ಹಣವಿಲ್ಲ' : ಕಣ್ಣೀರಿಟ್ಟ ಬಾಲಕಿ

ಕೊರೊನಾ ವೈರಸ್ ಲಾಕ್‌ಡೌನ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಬರುವ ಸಂಬಳದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಈಗ ಶಾಲಾ- ಕಾಲೇಜುಗಳು ಶುರುವಾಗುವ ಸಮಯವಾಗಿದ್ದು, ಮಕ್ಕಳ ಫೀಸ್ ಕಟ್ಟುವ ಸಮಯ ಬಂದಿದೆ. ಕೆಲವು ಶಾಲೆಗಳು ಅಧಿಕ ಫೀಸ್ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. 
 

First Published Jun 10, 2020, 4:28 PM IST | Last Updated Jun 10, 2020, 4:28 PM IST

ಬೆಂಗಳೂರು (ಜೂ. 10): ಕೊರೊನಾ ವೈರಸ್ ಲಾಕ್‌ಡೌನ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಬರುವ ಸಂಬಳದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಈಗ ಶಾಲಾ- ಕಾಲೇಜುಗಳು ಶುರುವಾಗುವ ಸಮಯವಾಗಿದ್ದು, ಮಕ್ಕಳ ಫೀಸ್ ಕಟ್ಟುವ ಸಮಯ ಬಂದಿದೆ. ಕೆಲವು ಶಾಲೆಗಳು ಅಧಿಕ ಫೀಸ್ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. 

ಸುವರ್ಣ ನ್ಯೂಸ್‌ನಿಂದ 'ಈ ವರ್ಷ ಅರ್ಧ ಫೀಸ್‌' ಅಭಿಯಾನ; ಶಿಕ್ಷಣ ಸಚಿವರೇ ಗಮನಿಸಿ

ನಿಮ್ಮ ಸುವರ್ಣ ನ್ಯೂಸ್ ಪೋಷಕರ ಪರವಾಗಿ ನಿಂತು 'ಈ ವರ್ಷ ಅರ್ಧ ಫೀಸ್' ಅಭಿಯಾನವನ್ನು ಶುರು ಮಾಡಿದೆ. ವಿಜಯಪುರದ ಬಾಲಕಿ ಸಮೃದ್ಧಿ ನೀಲಮಣಿ ತಮ್ಮ ಮನೆಯ ಕಷ್ಟವನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ.