Asianet Suvarna News Asianet Suvarna News

ಇಂಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಕಮಿಷನ್ ದಂಧೆ: ಡಿ ದರ್ಜೆ ನೌಕರರ ಪರ ನಿಂತ ಡೀಸಿ

ಇಂಡಿ ತಾಲ್ಲೂಕು ಮೆಡಿಕಲ್ ಸೂಪರಿಡೆಂಟ್ 35% ಕಮಿಷನ್ ದಂಧೆ ನಡೆಯುತ್ತಿದೆ. ಸಹಾಯಧನ ಪಡೆಯಲು ಡಿ ದರ್ಜೆ ನೌಕರರು ಲಂಚ ನೀಡಬೇಕಂತೆ. ಇಂಡಿ ತಾಲ್ಲೂಕು ಆಸ್ಪತ್ರೆ ಅಧೀಕ್ಷಕ ಶಿವಾನಂದ ದೇವರ ಈ ಕಮಿಷನ್ ದಂಧೆಯ ಕಿಂಗ್‌ಪಿನ್. ಡಿ ದರ್ಜೆಯ 13 ನೌಕರರಿಂದ ತಲಾ 10 ಸಾವಿರ ರೂ ಪಡೆದಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಎಕ್ಸ್‌ಕ್ಲೂಸಿವ್‌ನಲ್ಲಿ ಪ್ರಸಾರ ಮಾಡಿತು. 
 

ವಿಜಯಪುರ (ಮೇ. 30): ಇಂಡಿ ತಾಲ್ಲೂಕು ಮೆಡಿಕಲ್ ಸೂಪರಿಡೆಂಟ್ 35% ಕಮಿಷನ್ ದಂಧೆ ನಡೆಯುತ್ತಿದೆ. ಸಹಾಯಧನ ಪಡೆಯಲು ಡಿ ದರ್ಜೆ ನೌಕರರು ಲಂಚ ನೀಡಬೇಕಂತೆ. ಇಂಡಿ ತಾಲ್ಲೂಕು ಆಸ್ಪತ್ರೆ ಅಧೀಕ್ಷಕ ಶಿವಾನಂದ ದೇವರ ಈ ಕಮಿಷನ್ ದಂಧೆಯ ಕಿಂಗ್‌ಪಿನ್. ಡಿ ದರ್ಜೆಯ 13 ನೌಕರರಿಂದ ತಲಾ 10 ಸಾವಿರ ರೂ ಪಡೆದಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಎಕ್ಸ್‌ಕ್ಲೂಸಿವ್‌ನಲ್ಲಿ ಪ್ರಸಾರ ಮಾಡಿತು. 

Exclusive:ಇಲ್ಲಿ ಡಿ ದರ್ಜೆ ನೌಕರರು ಸಹಾಯಧನ ಪಡೆಯಬೇಕಂದ್ರೆ 35% ಕಮಿಷನ್ ಕೊಡ್ಬೇಕು..!

'ಕೋವಿಡ್ 19 ಸಮಯದಲ್ಲಿ ನಮ್ಮ ಆರೋಗ್ಯ ಸಿಬ್ಬಂದಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಅವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ನಾನು ಪರಿಶೀಲಿಸುತ್ತೇನೆ. ಜಿಲ್ಲಾಡಳಿತ ನೌಕರರ ಪರವಾಗಿರುತ್ತದೆ, ಯಾರೂ ಭಯಪಡುವ ಅಗತ್ಯ ಇಲ್ಲ' ಎಂದು ಡೀಸಿ ವಿಜಯ ಮಹಾಂತೇಶ್ ದನಮ್ಮನವರ್ ಹೇಳಿದ್ದಾರೆ.