Asianet Suvarna News Asianet Suvarna News

Exclusive: ಇಲ್ಲಿ ಡಿ ದರ್ಜೆ ನೌಕರರು ಸಹಾಯಧನ ಪಡೆಯಬೇಕಂದ್ರೆ 35% ಕಮಿಷನ್ ಕೊಡ್ಬೇಕು..!

ವಿಜಯಪುರ ತಾಲ್ಲೂಕು ಆಸ್ಪತ್ರೆ ಕಮಿಷನ್ ದಂಧೆಯ ಅಡ್ಡೆಯಾಗಿದೆ. ಲಂಚ ಕೊಡದೇ ಯಾವೊಂದು ಕೆಲಸವೂ ಇಲ್ಲಿ ಆಗಲ್ವಂತೆ. ಕೊರೊನಾ ಸಮಯದಲ್ಲಿ ಪ್ರಾಣ ಒತ್ತೆ ಇಟ್ಟು ಸಿಬ್ಬಂದಿ ಕೆಲಸ ಮಾಡಿದ್ದರು. ಆ ಸಿಬ್ಬಂದಿಗಳಿಂದ ಅಧಿಕಾರಿಗಳು ಲಂಚ ಪಡೆದಿದ್ದಾರೆ. 

ವಿಜಯಪುರ (ಮೇ. 30): ಇಲ್ಲಿನ ತಾಲ್ಲೂಕು ಆಸ್ಪತ್ರೆ ಕಮಿಷನ್ ದಂಧೆಯ ಅಡ್ಡೆಯಾಗಿದೆ. ಲಂಚ ಕೊಡದೇ ಯಾವೊಂದು ಕೆಲಸವೂ ಇಲ್ಲಿ ಆಗಲ್ವಂತೆ. ಕೊರೊನಾ ಸಮಯದಲ್ಲಿ ಪ್ರಾಣ ಒತ್ತೆ ಇಟ್ಟು ಸಿಬ್ಬಂದಿ ಕೆಲಸ ಮಾಡಿದ್ದರು. ಆ ಸಿಬ್ಬಂದಿಗಳಿಂದ ಅಧಿಕಾರಿಗಳು ಲಂಚ ಪಡೆದಿದ್ದಾರೆ. 

ಇಂಡಿ ತಾಲ್ಲೂಕು ಮೆಡಿಕಲ್ ಸೂಪರಿಡೆಂಟ್ 35% ಕಮಿಷನ್ ದಂಧೆ ನಡೆಯುತ್ತಿದೆ. ಸಹಾಯಧನ ಪಡೆಯಲು ಡಿ ದರ್ಜೆ ನೌಕರರು ಲಂಚ ನೀಡಬೇಕಂತೆ. ಇಂಡಿ ತಾಲ್ಲೂಕು ಆಸ್ಪತ್ರೆ ಅಧೀಕ್ಷಕ ಶಿವಾನಂದ ದೇವರ ಈ ಕಮಿಷನ್ ದಂಧೆಯ ಕಿಂಗ್‌ಪಿನ್. ಡಿ ದರ್ಜೆಯ 13 ನೌಕರರಿಂದ ತಲಾ 10 ಸಾವಿರ ರೂ ಪಡೆದಿದ್ದಾರೆ.