ಸಿಂಗಲ್ ಕೇಸ್.. ಡಬಲ್ ಕಾನೂನು..ಇದ್ಯಾವ ಸೀಮೆ ನ್ಯಾಯ..?


ರೈತನಿಗೆ ಅರೆಸ್ಟ್ ಭಾಗ್ಯ.. ಸೆಲೆಬ್ರೆಟಿಗಳಿಗೆ ನೋಟಿಸ್ ಸೌಭಾಗ್ಯ..!
ಪಕ್ಕಾ ಒರಿಜಿನಲ್ ಅಂದಿದ್ದ ನಟ ಜಗ್ಗೇಶ್ ಸೇಫ್ ಆಗಿದ್ದು ಹೇಗೆ..?
ಹುಲಿ ಉಗುರು ಕೇಸ್‌ನಲ್ಲಿ ಅರಣ್ಯಾಧಿಕಾರಿಗಳ ಡಬಲ್ ಗೇಮ್..!

First Published Oct 28, 2023, 3:32 PM IST | Last Updated Oct 28, 2023, 3:32 PM IST

ಹುಲಿ ಉಗುರಿನ ಪೆಂಡೆಂಟ್ ಧರಿಸೋದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ(Wildlife Protection Act) ಪ್ರಕಾರ ಶಿಕ್ಷಾರ್ಹ ಅಪರಾಧ. ಹಾಗಾದ್ರೆ ಅಷ್ಟೂ ಮಂದಿಗೆ ಶಿಕ್ಷೆಯಾಗ್ಲೇಬೇಕಲ್ವಾ..? ಯೆಸ್.. ಆಗ್ಲೇಬೇಕು. ಆದ್ರೆ ಇಲ್ಲಿ ಶಿಕ್ಷೆಯಾಗೋದು ಬಿಡಿ, ಕನಿಷ್ಠ ಅರೆಸ್ಟ್ ಕೂಡ ಆಗೋದಿಲ್ಲ. ಯಾಕಂದ್ರೆ ಇವ್ರೆಲ್ಲಾ ಸೆಲೆಬ್ರಿಟಿಗಳು, ನಮ್ಮ ರಾಜ್ಯದ ಸೋಕಾಲ್ಡ್ ಸೆಲೆಬ್ರಿಟಿ ಮನುಷ್ಯರು.. ಇಲ್ಲಿ ಶಿಕ್ಷೆ, ಅರೆಸ್ಟ್ ಅಂತ ಏನಾದ್ರೂ ಇದ್ರೆ, ಅದು ವರ್ತೂರು ಸಂತೋಷ್(Varthur Santhosh) ಅಂಥಾ ಸಾಮಾನ್ಯರಿಗೆ ಮಾತ್ರ. ಈ ನೆಲದ ಕಾನೂನು ಎಲ್ಲರಿಗೂ ಒಂದೇ.. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಅಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಣಿಮುತ್ತು ಉದುರಿಸಿದ್ದಾರೆ. ಸನ್ಮಾನ್ಯ ಘನತೆವೆತ್ತ ಮಂತ್ರಿಗಳೇ, ಕಾನೂನು ಎಲ್ಲರಿಗೂ ಒಂದೇ ಅನ್ನೋದಾದ್ರೆ, ಈ ನಿಖಿಲ್ ಕುಮಾರಸ್ವಾಮಿ, ದರ್ಶನ್ ತೂಗುದೀಪ(Darshan), ಜಗ್ಗೇಶ್(Jaggesh), ಸಚಿವೆ ಹೆಬ್ಬಾಳ್ಕರ್ ಪುತ್ರ, ಶಾಸಕ ಸವದಿ ಮಗ, ಚಿತ್ರ ನಿರ್ಮಾಪಕ ರಾಕ್'ಲೈನ್ ವೆಂಕಟೇಶ್. ಇವ್ರ ಮೇಲೆ ಯಾಕೆ ಕ್ರಮ ಜರುಗಿಸಿಲ್ಲ..? ಹುಲಿ ಉಗುರಿನ ಪೆಂಡೆಂಟ್ ಧರಿಸೋದು ಅಕ್ಷರಶಃ ಅಪರಾಧ. ವರ್ತೂರಿನ ರೈತ ಸಂತೋಷ್'ನನ್ನು ಬಿಗ್ ಬಾಸ್ ಮನೆಯಿಂದ ಎತ್ತಾಕಿಕೊಂಡು ಹೋಗಿದ್ದು ಇದೇ ಕಾರಣಕ್ಕೆ. ಹೀಗಂತ ಕಾಂಗ್ರೆಸ್ ಶಾಸಕರೇ ಸರ್ಕಾರಕ್ಕೆ ಆಗ್ರಹ ಮಾಡ್ತಿದ್ದಾರೆ. ಶಾಸಕ ಗಣಿಗ ರವಿ ಎತ್ತಿರೋ ಪ್ರಶ್ನೆಯಲ್ಲಿ ಅರ್ಥ ಇದೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಅಪರಾಧಕ್ಕಾಗಿ ಬಿಗ್ ಬಾಸ್ ಸ್ಪರ್ಧಿಯನ್ನು ಅಧಿಕಾರಿಗಳು ಅರೆಸ್ಟ್ ಮಾಡ್ಕೊಂಡ್ ಹೋಗ್ತಾರೆ. ಅದೇ "ನನ್ನ ಕೊರಳಲ್ಲಿರೋದು ಪಕ್ಕಾ ಒರಿಜಿನಲ್ ಹುಲಿ ಉಗುರಿನಿಂದ ಮಾಡಿರೋ ಪೆಂಡೆಂಟ್" ಅಂದವರನ್ನು ಅರೆಸ್ಟ್ ಮಾಡೋದಿರ್ಲಿ, ಟಚ್ ಮಾಡೋದಕ್ಕೂ ಅಧಿಕಾರಿಗಳಿಗೆ ಆಗಲ್ಲ.

ಇದನ್ನೂ ವೀಕ್ಷಿಸಿ:  ಹಮಾಸ್-ಇಸ್ರೇಲ್ ಯುದ್ಧಕ್ಕೆ ಬೈಡನ್ ಕೊಟ್ಟ ಕಾರಣವೇನು? ಮಹಾಯುದ್ಧಕ್ಕೆ ಕಾರಣವಾಗುತ್ತಾ ಕಾಳಗ..?