ಬೆಲೆ ಏರಿಕೆ ಗಾಯಕ್ಕೆ ಉಪ್ಪು ಸುರಿದ ಸರ್ಕಾರ: ವಾಹನಗಳ ತೆರಿಗೆ ಏರಿಸಿ ಸರ್ಕಾರದ ಆದೇಶ

ಜನರು ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ಬಳಲಿ ಬೆಂಡಾಗಿದ್ದಾರೆ. ಇದ್ರ ನಡುವೆ ಸರ್ಕಾರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ವಾಹನ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತೆ, ವಾಣಿಜ್ಯ ಬಳಕೆಯ ವಾಹನಗಳ ತೆರಿಗೆ ಏರಿಕೆಯಾಗಿದೆ. ಜೊತೆಗೆ ಲೈಫ್ ಟೈಮ್ ಟ್ಯಾಕ್ಸ್ ಕಟ್ಟಲು ಸರ್ಕಾರ ಆದೇಶಿಸಿದೆ. 
 

First Published Aug 7, 2023, 10:56 AM IST | Last Updated Aug 7, 2023, 10:56 AM IST

ಆಯ್ದ ವಾಹನಗಳ ತೆರಿಗೆ ಹೆಚ್ಚಳ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ(CM Siddaramaiah) ಬಜೆಟ್‌ನಲ್ಲಿ ಮಂಡಿಸಿದ್ದರು. ಅದರಂತೆ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ತಿದ್ದುಪಡಿ ಮಸೂದೆ–2023ಕ್ಕೆ ವಿಧಾನಮಂಡಲ ಒಪ್ಪಿಗೆ ನೀಡಿದೆ. ವಾಣಿಜ್ಯ ಬಳಕೆ, ಸರಕು ಸಾಗಣೆ ವಾಹನಗಳು ಹಾಗೂ ಮೋಟಾರು ಕ್ಯಾಬ್‌ಗಳ ತೆರಿಗೆ ಹೆಚ್ಚಳ(Tax Increase) ಮಾಡಿದೆ. ಇದುವರೆಗೆ ಮಿಡಿಯಂ ಗೂಡ್ಸ್ ವೆಹಿಕಲ್ಸ್ ವಾಹನಗಳ ಮಾಲೀಕರು ಪ್ರತಿ 3 ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕಿತ್ತು. ಈಗ ಒಂದೂವರೆ ಟನ್‌ನಿಂದ 12 ಟನ್‌ಗಳವರೆಗಿನ ತೂಕದ ವಾಹನಗಳಿಗೆ ಜೀವಿತಾವಧಿ ತೆರಿಗೆ ಸಂಗ್ರಹಿಸಲು ಆದೇಶಿಸಿಲಾಗಿದೆ. ಆಗಸ್ಟ್  1ರಿಂದಲೇ  ವೆಬ್ ಸೈಟ್‌ಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ. ಆದ್ರೆ ಒಂದೇ ಬಾರಿ ಲೈಫ್ ಟೈಮ್ ತೆರಿಗೆ ಆದೇಶಕ್ಕೆ ಬೆಂಗಳೂರು ಕರ್ಮಷಿಯಲ್ ಟ್ರಕ್ ಅಸೋಸಿಯೇಷನ್ (Bangalore Commercial Truck Association) ವಿರೋಧ ವ್ಯಕ್ತಪಡಿಸಿದೆ. ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರೋ ಕರ್ಮಷಿಯಲ್ ಟ್ರಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ. ಆದೇಶ ಹಿಂಪಡೆಯದಿದ್ರೆ ಹೋರಾಟದ ಹಾದಿ ಹಿಡಿಯುತ್ತೇವೆಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಶೀತಲಸಮರಕ್ಕೆ ಬ್ರೇಕ್ ಹಾಕಲು ಮುಂದಾದ ಸಿಎಂ: ಜಿಲ್ಲಾವಾರು ಸಭೆ ಮೂಲಕ ಅಸಮಾಧಾನಕ್ಕೆ ಮುಲಾಮು..!