ಶೀತಲಸಮರಕ್ಕೆ ಬ್ರೇಕ್ ಹಾಕಲು ಮುಂದಾದ ಸಿಎಂ: ಜಿಲ್ಲಾವಾರು ಸಭೆ ಮೂಲಕ ಅಸಮಾಧಾನಕ್ಕೆ ಮುಲಾಮು..!
ಜಿಲ್ಲಾವಾರು ಅಭಿವೃದ್ಧಿ, ಕೆಲಸ ಪರಿಶೀಲನೆ,ಅನುದಾನ ಹಂಚಿಕೆ
ಜಿಲ್ಲೆಯಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ವಿಸೃತ ಚರ್ಚೆ
ಸಮಸ್ಯೆಗಳಿಗೆ ಯಾವ ರೀತಿ ಮುಕ್ತಿ ನೀಡಬೇಕು ಎಂದು ಚರ್ಚೆ
ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ವರ್ಸಸ್ ಸಚಿವರ ಮುನಿಸಿಗೆ ಸಿಎಂ ಮುಲಾಮು ಹಚ್ಚಲು ಮುಂದಾಗಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನುಡಿದಂತೆ, ನಡೆಯಲು ಹೆಜ್ಜೆ ಇಟ್ಟಿದ್ದಾರೆ. ಇಂದು ಜಿಲ್ಲಾವಾರು ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ(CM Siddaramaiah) ಸಿದ್ಧವಾಗಿದ್ದಾರೆ. ಈ ಮೂಲಕ ಶಾಸಕರ ಅಸಮಧಾನಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಶಾಸಕರು V/S ಸಚಿವರ ಸಂಘರ್ಷದ ಕಿಚ್ಚು ಹೈಕಮಾಂಡ್ ಅಂಗಳದವರೆಗೂ ಹೋಗಿ ಬಂದಿದೆ. ಸಚಿವರ ವಿರುದ್ಧ 30 ಶಾಸಕರ ಪತ್ರ(MLAs Latter) ಸಮರ ಯಾವ ರೇಂಜಿಗೆ ಬಿರುಗಾಳಿ ಎಬ್ಬಿಸಿದೆ ಅಂದ್ರೆ ಈಗ ಸ್ವತಃ ಸಿಎಂ ಸಿದ್ದರಾಮಯ್ಯ ಜಿಲ್ಲಾವಾರು ಶಾಸಕರ ಕ್ಷೇತ್ರದ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಮೂರು 3 ದಿನ ಜಿಲ್ಲಾವಾರು ಜನಪ್ರತಿನಿಧಿಗಳ ಸಭೆ(Meeting) ನಿಗದಿಯಾಗಿದ್ದು. ಪಕ್ಷದ ಶಾಸಕರು ಭಾಗಿಯಾಗಲಿದ್ದಾರೆ. ಮೊದಲ ದಿನ 6 ಜಿಲ್ಲೆಗಳ ಸಭೆ ನಡೆಯಲಿದೆ. ಬೆಳಗ್ಗೆ 11 ಗಂಟೆಯಿಂದ 2 ಗಂಟೆ, ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆಯವರಗೆ ಪ್ರತ್ಯೇಕವಾಗಿ ಜಿಲ್ಲಾವಾರು ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ದೂರು ಬರುವ ಸಾಧ್ಯತೆಗಳಿವೆ. ಈ ದೂರುಗಳನ್ನು ಸಿಎಂ ಸಿದ್ದರಾಮಯ್ಯ ಹೇಗೆ ಬಗೆ ಹರಿಸುತ್ತಾರೆ ಅನ್ನೋದು ಸದ್ಯದ ಕುತೂಹಲ.
ಇದನ್ನೂ ವೀಕ್ಷಿಸಿ: ರಜನಿಕಾಂತ್ 'ಜೈಲರ್' ಸಿನಿಮಾ ನೋಡಬೇಕಾ ?: ಟಿಕೆಟ್ ದರ ಎಷ್ಟು ಗೊತ್ತಾ ?