Asianet Suvarna News Asianet Suvarna News

'ಲಾಕ್‌ಡೌನ್ ಶುರುವಾಗೋದೆ ಸ್ವಿಮ್ಮಿಂಗ್ ಪೂಲ್, ಜಿಮ್ ಬಂದ್ ಮಾಡುವುದರಿಂದ' ಜಿಮ್ ಟ್ರೇನರ್‌ಗಳ ಆಕ್ರೋಶ

ಸರ್ಕಾರದ 50:50 ನಿಯಮದ ವಿರುದ್ದ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಜಿಮ್, ಈಜುಕೊಳ ಟ್ರೈನರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಫೆ. 02):  ಸರ್ಕಾರದ 50:50 ನಿಯಮದ ವಿರುದ್ದ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಜಿಮ್, ಈಜುಕೊಳ ಟ್ರೈನರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಬಾರ್ ಪಬ್‌ಗಳಿಗೆ ಸರ್ಕಾರ ಕಠಿಣ ನಿಯಮಗಳಿಂದ ವಿನಾಯ್ತಿ ನೀಡಿದೆ. ಆದ್ರೆ ಕಷ್ಟದಲ್ಲಿರುವ ಜಿಮ್, ಈಜುಕೊಳಗಳಿಗೆ ಮಾತ್ರ ಹೊರೆಯಾಗ್ತಿದೆ. ಲಾಕ್‌ಡೌನ್ ಶುರುವಾಗೋದೆ ಸ್ವಿಮ್ಮಿಂಗ್ ಪೂಲ್, ಜಿಮ್ ಬಂದ್ ಮಾಡುವುದರಿಂದ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ನಡೆಸ್ತಿದ್ರೂ ವಿನಾಯ್ತಿ ನೀಡ್ತಿಲ್ಲ, ಇದು ಸರಿಯಲ್ಲ. ಸ್ವಿಮ್ ಮಾಡೋದ್ರಿಂದ ಇಮ್ಯುನಿಟಿ ಪವರ್ ಹೆಚ್ಚಾಗುತ್ತೆ. ನ್ಯಾಚುರಲ್ ಇಮ್ಯುನಿಟಿಗಾಗಿ ಸ್ವಿಮ್, ಜಿಮ್ ಮಾಡ್ಬೇಕಾಗುತ್ತೆ. ವೀಕೆಂಡಲ್ಲಿ ಜನ ಸ್ವಿಮ್ಮಿಂಗ್ ಬರ್ತಿದ್ರು ಅದಕ್ಕೂ ಬ್ರೇಕ್ ಬಿದ್ದಿದೆ. ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇವೆ, ಸರ್ಕಾರ ಈ ಬಾರಿಯಾದರೂ ನಿರ್ಧಾರಕ್ಕೆ ಬರಲಿ' ಎಂದು  ಸ್ವಿಮ್ಮಿಂಗ್ ಮತ್ತು ಜಿಮ್ ಟ್ರೈನರ್ ಅಭಿಷೇಕ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 


 

Video Top Stories