ನನ್ನ ಮಗನ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ: ಅವರಿಬ್ಬರೂ ಮದುವೆ ಆಗಬಹುದಿತ್ತು

ನನ್ನ ಮಗ ಡಿ.ಕೆ. ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ. ಅವರಿಬ್ಬರು ಸ್ನೇಹಿತರು,‌ ಆಗಾಗ ನನಗೂ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರು ಇಷ್ಟಪಟ್ಟಿದ್ದರೆ ಆ ಸಮಯದಲ್ಲೇ ಇಬ್ಬರು ಮದುವೆ ಅಗಬಹುದಿತ್ತು.‌‌

First Published Feb 20, 2023, 6:32 PM IST | Last Updated Feb 20, 2023, 6:32 PM IST

ಬೆಂಗಳೂರು (ಫೆ.20): ನನ್ನ ಮಗ ಡಿ.ಕೆ. ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ. ಅವರಿಬ್ಬರು ಸ್ನೇಹಿತರು,‌ ಅವರು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲೂ ಸ್ನೇಹಿತರಾಗಿದ್ದರು. ಆಗಾಗ ನನಗೂ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರು ಇಷ್ಟಪಟ್ಟಿದ್ದರೆ ಆ ಸಮಯದಲ್ಲೇ ಇಬ್ಬರು ಮದುವೆ ಅಗಬಹುದಿತ್ತು.‌‌ ಅದಕ್ಕೆ ಯಾರ ವಿರೋಧವೂ ಇರಲಿಲ್ಲ. ಹಾಗಾಗಿ ಅವರ ಮೇಲೆ ಎನೂ ಹೇಳುವುದಿಲ್ಲ‌‌, ಎಂದು ಡಿ.ಕೆ.ರವಿ ತಾಯಿ ಗೌರಮ್ಮ‌ ತಿಳಿಸಿದರು.

ಮೂರು ಬಾರಿ ನಮ್ಮ ಮನೆಗೆ ಬಂದಿದ್ದ ರೋಹಿಣಿ ಸಿಂಧೂರಿ: ನಮ್ಮ ಮನೆಗೆ ರೋಹಿಣಿ ಸಿಂಧೂರಿ 3 ಬಾರಿ ಬಂದಿದ್ದಾರೆ. ಡಿ.ಕೆ. ರವಿಯ ಸಾಮಾಜಿಕ ಕಳಕಳಿ ಕಂಡು ನನಗೂ ಮಾರ್ಗದರ್ಶನ ಮಾಡು ಎಂದು ರೋಹಿಣಿ ನನ್ನ ಮುಂದೆಯೇ ಕೇಳಿದ್ದಾಳೆ. ರೋಹಿಣಿ ಸಿಂಧೂರಿ ಮೇಲೆ ಅಪರಾಧ ಹೊರಿಸಲು ರೂಪ‌ ಅವರು ನನ್ನ ಮಗನ ಹೆಸರನ್ನು ತಂದಿದ್ದಾರೆ. ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರು ತರಬೇಡಿ. ನೀವೆ ಆಗಲಿ, ರಾಜಕಾರಣಿಗಳೇ ಆಗಲಿ ಯಾವುದೆ ವಿಚಾರಕ್ಕೆ ನನ್ನ ಮಗನ ಹೆಸರು ತರಬೇಡಿ ಎಂದು ಗೌರಮ್ಮ ಎಚ್ಚರಿಕೆ ನೀಡಿದರು.