'ಹೀಗಾದ್ರೆ ಜನ ದಂಗೆ ಏಳ್ತಾರೆ,ಸಿವಿಲ್ ವಾರ್ ಶುರುವಾಗುತ್ತೆ; ಅದಕ್ಕೆ ಮೋದಿಯೇ ಕಾರಣ'

ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ತರಲು ಹೊರಟಿರುವ ಸರ್ಕಾರದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಬಂದ್‌ಗೂ ಕೂಡಾ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

First Published Sep 28, 2020, 4:20 PM IST | Last Updated Sep 28, 2020, 4:24 PM IST

ಬೆಂಗಳೂರು (ಸೆ. 28): ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ತರಲು ಹೊರಟಿರುವ ಸರ್ಕಾರದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಬಂದ್‌ಗೂ ಕೂಡಾ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಖಂಡಿಸಿ ರೈತ ಸಂಘದ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದಾರೆ. ' ಬಂಧನ ಮಾಡೋದು ಪ್ರಜಾಪ್ರಭುತ್ವ ವಿರೋಧಿಗಳು ಮಾಡುವ ಕೆಲಸ.  ಈ ಚಳುವಳಿಯನ್ನು ಹತ್ತಿಕ್ಕಲು ನೀವು ಪ್ರಯತ್ನಿಸುತ್ತಿದ್ದೀರಿ. ನಮ್ಮ ಹಕ್ಕನ್ನು ನೀವ್ಯಾಕೆ ಕಸಿದುಕೊಳ್ಳುತ್ತೀರಿ? ನಮಗೂ ಸ್ವಾತಂತ್ರ ಕೊಡಿ' ಎಂದಿದ್ದಾರೆ. 

ಸರ್ಕಾರ ನಮ್ಮ ಜೊತೆ ಚರ್ಚೆ ನಡೆಸಿಲ್ಲ, ನಮಗೆ ಈ ಕಾಯ್ದೆ ಬೇಡ : ರೈತ ಮಹಿಳೆ

'ಕಾರ್ಪೋರೇಟ್ ಪ್ರವೇಶದ ನಂತರ ಸಿವಿಲ್ ವಾರ್ ಶುರುವಾಗುತ್ತದೆ. ಇದಕ್ಕೆ ಪ್ರಧಾನಿ ಮೋದಿ ಕಾರಣ ಆಗ್ತಾರೆ. ಜನರೂ ಕೂಡಾ ದಂಗೆ ಏಳ್ತಾರೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.