ರಾಯಚೂರು: ಹುಡುಗಿಯರ ಮೇಲೆ ಹಣ ಎಸೆದು ಗ್ರಾಪಂ ಸದಸ್ಯರ ಡ್ಯಾನ್ಸ್, ವ್ಯಾಪಕ ಆಕ್ರೋಶ
ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಹುಡಿಗಿಯರೊಂದಿಗೆ ಗ್ರಾಪಂ ಸದಸ್ಯರು ಡ್ಯಾನ್ಸ್ ಮಾಡಿರುವ ಘಟನೆ ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ಜರುಗಿದೆ. ಕಳೆದ ಮೇ 26ರಂದು ಆಯೋಜಿಸಿದ್ದ ಸಮಾರಂಭಕ್ಕೆ ಹೈದರಾಬಾದ್‌ದಿಂದ ಗಾಯನ ಹಾಗೂ ನೃತ್ಯ ಮಾಡಲು ತಂಡವನ್ನು ಕರೆಸಲಾಗಿತ್ತು.
ಬೆಂಗಳೂರು (ಮೇ. 29): ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಹುಡಿಗಿಯರೊಂದಿಗೆ ಗ್ರಾಪಂ ಸದಸ್ಯರು ಡ್ಯಾನ್ಸ್ ಮಾಡಿರುವ ಘಟನೆ ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ಜರುಗಿದೆ. ಕಳೆದ ಮೇ 26ರಂದು ಆಯೋಜಿಸಿದ್ದ ಸಮಾರಂಭಕ್ಕೆ ಹೈದರಾಬಾದ್‌ದಿಂದ ಗಾಯನ ಹಾಗೂ ನೃತ್ಯ ಮಾಡಲು ತಂಡವನ್ನು ಕರೆಸಲಾಗಿತ್ತು, ಸಾರ್ವಜನಿಕವಾಗಿ ಹುಡಿಗಿಯರು ನೃತ್ಯ ಮಾಡುತ್ತಿದ್ದ ಸಮಯದಲ್ಲಿ ಗ್ರಾಪಂ ಸದಸ್ಯರು ಮೈ ಮರೆತು ಆ ಹುಡಿಗಿರೊಂದಿಗೆ ಕುಣಿದುಕುಪ್ಪಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಇದ್ದಾರೆ ಎನ್ನುವ ಪರಿಜ್ಞಾನವನ್ನು ಮರೆತು ಡ್ಯಾನ್ಸ್ ಮಾಡಿದ್ದು ಇದರ ಜೊತೆಗೆ ಹುಡಿಗಿಯರ ಮೇಲೆ ನೋಟ್‌ಗಳನ್ನು ಎಸೆದಿದ್ದಾರೆ. ಹುಡಿಗಿಯರೊಂದಿಗೆ ಗ್ರಾಪಂ ಸದಸ್ಯರ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್‌ಗೊಂಡಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.