Asianet Suvarna News Asianet Suvarna News

ಮೀಸಲಾತಿ ಟೆನ್ಷನ್‌: ಸಿಎಂ ಬಸವರಾಜ ಬೊಮ್ಮಾಯಿಗೆ 1 ತಿಂಗಳ ಗಡುವು

*  2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಬಿಗಿ ಪಟ್ಟು
*  ಕೊರೋನಾ, ಕ್ಯಾಬಿನೆಟ್‌ ಕದನದ ಬೆನ್ನಲ್ಲೇ ಇದೀಗ ಮೀಸಲಾತಿ ಟೆನ್ಷನ್‌ 
*  ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿಗಾಗಿ ಆಗ್ರಹ 

First Published Aug 23, 2021, 12:01 PM IST | Last Updated Aug 23, 2021, 12:01 PM IST

ಬೆಂಗಳೂರು(ಆ.23): ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆ ಸವಾಲುಗಳ ಸಾಲೇ ಇದೆ. ಹೌದು, ಕೊರೋನಾ, ಕ್ಯಾಬಿನೆಟ್‌ ಕದನದ ಬೆನ್ನಲ್ಲೇ ಇದೀಗ ಮೀಸಲಾತಿ ಟೆನ್ಷನ್‌ ಆರಂಭವಾಗಿದೆ. ಮೀಸಲಾತಿಗಾಗಿ ಸಿಎಂ ಮನೆ ಕದ ತಟ್ಟುತ್ತಿದ್ದಾರೆ ಮುಖಂಡರು. ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಬಿಗಿ ಪಟ್ಟು ಹಿಡಿಯಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಒಂದು ಗುಡುವು ಕೊಟ್ಟಿದ್ದಾರೆ ಪಂಚಮಸಾಲಿ ಮುಖಂಡರು. ಹುಬ್ಬಳ್ಳಿಯಲ್ಲಿ ಸಭೆ ಮಾಡಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ. ಇನ್ನು ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿಗಾಗಿ ಆಗ್ರಹಿಸಲಾಗಿದೆ. 

ಮಕ್ಕಳೇ.. ಯಾವ ಆತಂಕ ಇಲ್ಲದೇ ಶಾಲೆಗೆ ಬನ್ನಿ, ಸಚಿವ ನಾಗೇಶ್‌