'ರಕ್ಷಾ ಕವಚ' ಭೇದಿಸಿ ಮುಡಾ ಕೋಟೆಗೆ ನುಗ್ಗಲಿದ್ಯಾ ಸಿಬಿಐ? ಮುಡಾಯಣದಲ್ಲಿ ಮುಖ್ಯಮಂತ್ರಿಗೆ ರಾಜಧರ್ಮದ ಪಾಠ!

ಮುಡಾ ಮಹಾಯುದ್ಧದಲ್ಲಿ ಸಿದ್ದರಾಮಯ್ಯನವರಿಗೆ ಆಘಾತಗಳ ಮೇಲೆ ಆಘಾತ. ಶಾಕ್ ಮೇಲೆ ಶಾಕ್. ಅತ್ತ ಎಫ್ಐಆರ್ ದಾಖಲಾದ್ರೆ, ಇತ್ತ ಸಿಬಿಐ ತನಿಖೆಗೆ ಆಗ್ರಹಿಸಿ ಕೋರ್ಟ್'ಗೆ ಅರ್ಜಿ ಸಲ್ಲಿಕೆಯಾಗಿದೆ. ಇದರ ಮಧ್ಯೆ ಒಂದ್ಕಡೆ ನೀತಿಪಾಠ, ಮತ್ತೊಂದ್ಕಡೆ ರಾಜಧರ್ಮದ ಪಾಠ. ಮುಡಾಯಣದಲ್ಲಿ ಮುಖ್ಯಮಂತ್ರಿಗಳಿಗೆ ನ್ಯಾಯಪೀಠ ಹೇಳಿದ ನೀತಿಪಾಠ, ರಾಜಧರ್ಮ ಪಾಠದ ಹಿಂದಿನ ಅಸಲಿ ಮರ್ಮ ಏನು?

First Published Sep 29, 2024, 2:42 PM IST | Last Updated Sep 29, 2024, 2:42 PM IST

ಮುಡಾ ಮಾಯಾಜಾಲ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇನ್ನಿಲ್ಲದಂತೆ ಕಾಡ್ತಾ ಇದೆ. ಹೋದಲ್ಲಿ ಬಂದಲ್ಲಿ ಸಿಎಂಗೆ ಮುಡಾದ್ದೇ ಟೆನ್ಷನ್. ಇದು ಸಿದ್ದರಾಮಯ್ಯನವರ ಆ ಟೆನ್ಶನ್ ಹೆಚ್ಚಿಸೋ ಮತ್ತೊಂದು ಸ್ಫೋಟಕ ಸುದ್ದಿ. ರಾಜಕೀಯ ಆರೋಪ-ಪ್ರತ್ಯಾರೋಪಗಳು ಒಂದ್ಕಡೆಯಾದ್ರೆ, ಮುಖ್ಯಮಂತ್ರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಇನ್ನೇನು ಶುರುವಾಗುತ್ತೆ. ಆದ್ರೆ ಅದಕ್ಕೂ ಮೊದ್ಲೇ ಸಿದ್ದರಾಮಯ್ಯನವರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಅಷ್ಟಕ್ಕೂ ಏನದು ಆಘಾತ? ಆ ಕುರಿತ ವರದಿ ಇಲ್ಲಿದೆ.