ಮಕ್ಕಳೇ.. ಯಾವ ಆತಂಕ ಇಲ್ಲದೇ ಶಾಲೆಗೆ ಬನ್ನಿ, ಸಚಿವ ನಾಗೇಶ್‌

*  ಆ. 30 ರಂದು ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ 
*  1 ರಿಂದ 8ನೇ ತರಗತಿ ಆರಂಭದ ಕುರಿತು ಚರ್ಚಿಸಿ ನಿರ್ಧಾರ 
*  ಮಕ್ಕಳಿಗೆ ಧೈರ್ಯ ತುಂಬಿದ ಶಿಕ್ಷಣ ಸಚಿವರು 

First Published Aug 23, 2021, 11:17 AM IST | Last Updated Aug 23, 2021, 11:17 AM IST

ಬೆಂಗಳೂರು(ಆ.23):  ಯಾವ ಆತಂಕವೂ ಇಲ್ಲದೆ ಶಾಲೆಗೆ ಬನ್ನಿ ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಆ.30 ರಂದು ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಲಾಗುವುದು. ಅಂದು 1 ರಿಂದ 8ನೇ ತರಗತಿ ಆರಂಭದ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಆ. 30 ರ ನಂತರ 5 ಜಿಲ್ಲೆಗಳಲ್ಲಿ ಶಾಲೆಗಳು ಓಪನ್‌ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.  

ಒಂದೂವರೆ ವರ್ಷದ ಬಳಿಕ ಶಾಲೆ ಓಪನ್‌: ಭಯಬಿಡಿ, ಕೊರೋನಾ ರೂಲ್ಸ್‌ ಫಾಲೋ ಮಾಡಿ..!