Asianet Suvarna News Asianet Suvarna News

ಡೆಲ್ಟಾದಿಂದ ಮೈಸೂರು ವ್ಯಕ್ತಿ ಸಂಪೂರ್ಣ ಗುಣಮುಖ, ಭಯಬೇಡ: DHO ಪ್ರಸಾದ್ ಸ್ಪಷ್ಟನೆ

ಡೆಲ್ಟಾ ವೈರಸ್ ಪತ್ತೆಯಾಗಿದ್ದ ಮೈಸೂರಿನ ಯುವಕ ಈಗ ಸಂಪೂರ್ಣ ಗುಣಮುಖನಾಗಿದ್ದಾನೆ. ಡೆಲ್ಟಾ ಬಗ್ಗೆ ಯಾರೂ ಆತಂಕಪಡಬೇಕಾಗಿಲ್ಲ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ DHO ಪ್ರಸಾದ್ ಹೇಳಿಕೆ ನೀಡಿದ್ದಾರೆ. 

ಮೈಸೂರು (ಜೂ. 23): ಡೆಲ್ಟಾ ವೈರಸ್ ಪತ್ತೆಯಾಗಿದ್ದ ಮೈಸೂರಿನ ಯುವಕ ಈಗ ಸಂಪೂರ್ಣ ಗುಣಮುಖನಾಗಿದ್ದಾನೆ. ಡೆಲ್ಟಾ ಬಗ್ಗೆ ಯಾರೂ ಆತಂಕಪಡಬೇಕಾಗಿಲ್ಲ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ DHO ಪ್ರಸಾದ್ ಹೇಳಿಕೆ ನೀಡಿದ್ದಾರೆ. 

ಕರ್ನಾಟಕ ಸೇರಿ 5 ಕಡೆ ಡೆಲ್ಟಾ ಪ್ಲಸ್ ವೈರಸ್ ಪತ್ತೆ, ಲಸಿಕೆ ಹಾಕಿಸಿಕೊಂಡವರಿಗೂ ಅಪಾಯನಾ..?

' ಮೇ 04 ರಂದು ಯುವಕನಿಗೆ ಕೊರೋನಾ ದೃಢಪಟ್ಟಿತ್ತು. 40 ರ್ಯಾಂಡಮ್ ಟೆಸ್ಟ್ ಸ್ಯಾಂಪಲ್‌ನಲ್ಲಿ ಇಬ್ಬರಿಗೆ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ತಕ್ಷಣವೇ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿತ್ತು. ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇಡಲಾಗಿದೆ' ಎಂದು  DHO ಪ್ರಸಾದ್ ಹೇಳಿಕೆ ನೀಡಿದ್ದಾರೆ. 

 

Video Top Stories