Asianet Suvarna News Asianet Suvarna News

ಕರ್ನಾಟಕ ಸೇರಿ 5 ಕಡೆ ಡೆಲ್ಟಾ ಪ್ಲಸ್ ವೈರಸ್ ಪತ್ತೆ, ಲಸಿಕೆ ಹಾಕಿಸಿಕೊಂಡವರಿಗೂ ಅಪಾಯನಾ..?

ಡೆಲ್ಟಾ ರೂಪಾಂತರಿಯಾಗಿರುವ ಡೆಲ್ಟಾ ಪ್ಲಸ್ ಸೋಂಕು ಈಗ ಕರ್ನಾಟಕ ಸೇರಿ 5 ಕಡೆ ಪತ್ತೆಯಾಗಿದೆ. ಈ ವೈರಸ್ ಲಸಿಕೆಯ ಶಕ್ತಿ, ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 3 ನೇ ಅಲೆಗೂ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ. 

ಬೆಂಗಳೂರು (ಜೂ. 23): ಡೆಲ್ಟಾ ರೂಪಾಂತರಿಯಾಗಿರುವ ಡೆಲ್ಟಾ ಪ್ಲಸ್ ಸೋಂಕು ಈಗ ಕರ್ನಾಟಕ ಸೇರಿ 5 ಕಡೆ ಪತ್ತೆಯಾಗಿದೆ. ಈ ವೈರಸ್ ಲಸಿಕೆಯ ಶಕ್ತಿ, ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 3 ನೇ ಅಲೆಗೂ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ. 

'ಡೆಲ್ಟಾ ಪ್ಲಸ್ ವೈರಸ್ ಲಸಿಕೆಯ ಶಕ್ತಿ, ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ಶಕ್ತಿ ಹೊಂದಿದೆ. ಹಾಗಾಗಿ ರೋಗಿಗಳನ್ನು ಪ್ರಾಥಮಿಕ ಹಂತದಿಂದಲೇ ಪರಿಶೀಲಿಸಬೇಕಾಗುತ್ತದೆ. ಸರ್ಕಾರವೂ ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದೆ' ಎಂದು ಕೊರೋನಾ ವಿಜ್ಞಾನಿ ಡಾ. ವಿಶಾಲ್ ರಾವ್ ಹೇಳಿದ್ದಾರೆ. 
 

Video Top Stories