Asianet Suvarna News

ಅತ್ತ ಡೆಲ್ಟಾ ಆರ್ಭಟದ ನಡುವೆ ಕಾಲೇಜು ಪುನಾರಂಭ, ಇತ್ತ ಸಿಎಂ ಕುರ್ಚಿಗಾಗಿ ಕೈ ನಾಯಕರ ರಂಪ

Jun 23, 2021, 11:10 PM IST

ಬೆಂಗಳೂರು (ಜೂ.23): 

  • ಕೊರೋನಾ ಎರಡನೇ ಅಲೆಯಿಂದ ಕಂಗಾಲಾಗಿದ್ದ ಜನ, ಇನ್ನೇನು ನಿಟ್ಟುಸಿರು ಬಿಡ್ಬೇಕು ಅನ್ನುವಷ್ಟರಲ್ಲಿ ಕೊರೋನಾವೈರಸ್‌ನ ಡೆಲ್ಟಾ ತಳಿ ಆರ್ಭಟ ಶುರುಮಾಡಿದೆ. ಡೆಲ್ಟಾವೈರಸ್‌ನ ರೋಗಲಕ್ಷಣಗಳೇನು?  
  • ಇನ್ನೊಂದು ಕಡೆ ಹಳಿತಪ್ಪಿರುವ ಶಿಕ್ಷಣವ್ಯವಸ್ಥೆಯನ್ನು ಸರಿದಾರಿಗೆ ತರಲು ಸರ್ಕಾರ ಶಾಲಾ-ಕಾಲೇಜು ಪುನಾರಂಭಕ್ಕೆ ಸಿದ್ಧತೆ ನಡೆಸುತ್ತಿದೆ. ಸರ್ಕಾರದ ಮುಂದಿರುವ ಆಯ್ಕೆಗಳೇನು? ಸಿದ್ಧತೆ ಹೇಗಿದೆ?
  • ಇವುಗಳೆಲ್ಲದರ ನಡುವೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗುತ್ತಿರುವುದು ನೆಮ್ಮದಿಯ ವಿಚಾರ. ಆದರೆ ಇಂದು ಏರಿಕೆ ಕಂಡಿದೆ.  ಇಂದಿನ ಅಂಕಿಅಂಶಗಳತ್ತ ಒಮ್ಮೆ ಕಣ್ಣು ಹಾಯಿಸೋಣ
  • ಕಾಂಗ್ರೆಸ್‌ ನಾಯಕರಿಗೆ ಈಗಾಗಲೇ ಸಿಎಂ ಕುರ್ಚಿಯ ಚಿಂತೆ ಶುರುವಾಗಿದೆ. ಸಿದ್ದರಾಮಯ್ಯ, ಡಿಕೆಶಿ ಬೆಂಬಲಿಗರು ಸಿಎಂ ಕುರ್ಚಿಗೆ ತಮ್ಮ ನಾಯಕರ ಪರ ಟವೆಲ್‌ ಹಾಕುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.