Asianet Suvarna News Asianet Suvarna News

Makara Sankranti: ಗವಿಗಂಗಾಧರನ ಪಾದ ಸ್ಪರ್ಶಿಸಿದ ಸೂರ್ಯ

ಬೆಂಗಳೂರಿನ ಐತಿಹಾಸಿಕ ಪ್ರಸಿದ್ಧ ಗವಿಗಂಗಾದರೇಶ್ವರ ದೇವರ ಮೇಲೆ ಮಕರ ಸಂಕ್ರಮಣದ ಸೂರ್ಯರಶ್ಮಿ ಪೂರ್ಣ ಪ್ರಮಾಣದಲ್ಲಿ ಈಶ್ವರನ ಮೇಲೆ ಅಭಿಷೇಕವನ್ನು ಮಾಡಿದೆ. ಈ ಸೂರ್ಯ ರಶ್ಮಿ ಸ್ಪರ್ಶಕಾಲದಲ್ಲಿ ಈಶ್ವರನಿಗೆ ನಡೆಯಲಿದೆ ನಿರಂತರ ಅಭಿಷೇಕ ಮಾಡಲಾಗುತ್ತಿತ್ತು. ಈ ಕುರಿತ ವೀಡಿಯೋ ಇಲ್ಲಿದೆ ನೋಡಿ.. 

ಬೆಂಗಳೂರು (ಜ.15):  ಬೆಂಗಳೂರಿನ ಐತಿಹಾಸಿಕ ಪ್ರಸಿದ್ಧ ಗವಿಗಂಗಾದರೇಶ್ವರ ದೇವರ ಮೇಲೆ ಮಕರ ಸಂಕ್ರಮಣದ ಸೂರ್ಯರಶ್ಮಿ ಪೂರ್ಣ ಪ್ರಮಾಣದಲ್ಲಿ ಈಶ್ವರನ ಮೇಲೆ ಅಭಿಷೇಕವನ್ನು ಮಾಡಿದೆ. ಈ ಸೂರ್ಯ ರಶ್ಮಿ ಸ್ಪರ್ಶಕಾಲದಲ್ಲಿ ಈಶ್ವರನಿಗೆ ನಡೆಯಲಿದೆ ನಿರಂತರ ಅಭಿಷೇಕ ಮಾಡಲಾಗುತ್ತಿತ್ತು. ಈ ಕುರಿತ ವೀಡಿಯೋ ಇಲ್ಲಿದೆ ನೋಡಿ.. 

ಸೂರ್ಯ ರಶ್ಮಿ ಸ್ಪರ್ಶದ ಮುನ್ನವೇ ಅಭಿಷೇಕಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಂತರ ಕಳಸದೊಂದಿಗೆ ಗರ್ಭಗುಡಿಗೆ‌ ಬಂದ  ದಿಕ್ಷೀತರು, ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತರಿದ ನಡೆಯಲಿದೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.  ಒಟ್ಟು ಸಂಜೆ 5.20 ರಿಂದ 5.36 ನಿಮಿಷದವರೆಗೆ ಸೂರ್ಯರಶ್ಮಿ ಗವಿಗಂಗಾಧರೇಶ್ವರನನ್ನು ಸ್ಪರ್ಶ ಮಾಡಿದೆ.

ಗವಿ ಗಂದಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಮಾತನಾಡಿ, ಕಳೆದ ವರ್ಷ ಪರಮೇಶ್ವರ ದರ್ಶನ ಮಾಡಿರಲಿಲ್ಲ. ಈ ವರ್ಷ ಸಂಕ್ರಾಂತಿಯ ಶುಭದಿನ ಸ್ಪರ್ಶ ಮಾಡಿದ್ದಾನೆ. ದೇಶ ಸುಭಿಕ್ಷವಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ. ಎಲ್ಲರೂ ಒಳ್ಳೆ ಮನಸ್ಕರಾಗಿರಲಿ. ಕಳೆದ ವರ್ಷ ಸಾಕಷ್ಡು ಅನಾನುಕೂಲ, ತೊಂದರೆ ಆಯ್ತು. ಈ ಬಾರಿ ಯಾವುದೇ ತೊಂದರೆ ಆಗೋದಿಲ್ಲ. ಭಾಸ್ಕರ ಮೂರು ನಿಮಿಷ 12 ಸೆಕೆಂಡ್ ಗಂಗಾಧರನ ಸ್ಪರ್ಶ ಮಾಡಿದ್ದಾನೆ. ಶಿರೋ  ಭಾಗದಲ್ಲಿ ಪೂರ್ಜ ಪೂರ್ಣವಾಗಿತ್ತ. ಅಲ್ಲೀವರೆಗೂ ಸೂರ್ಯ ಗಂಗಾಧರನ ಸ್ಪರ್ಶ ಮಾಡಿದ್ದನು. ನಾಲ್ಕು ವರ್ಷಗಳ ಕಾಲ ಕೇವಲ 18 ಸೆಕೆಂಡ್ ಸ್ಪರ್ಶ ಮಾಡಿತ್ತು. ಈ ಬಾರಿ 3.12 ನಿಮಿಷ ಸ್ಪರ್ಶ ಮಾಡಿದೆ. ಈ ವರ್ಷ ಯಾವುದೇ ಅನಾಹುತ, ಅನಾನುಕೂಲ ಆಗೋದಿಲ್ಲ ಎಂದು ಸಂದೇಶ ಕೊಟ್ಟಿದ್ದಾನೆ ಎಂದು ತಿಳಿಸಿದರು.

Video Top Stories