Asianet Suvarna News Asianet Suvarna News

ಕೊರೋನಾ ಲಸಿಕೆ ಹಾಕಿಸಿಕೊಂಡರೆ ಸೀರೆ, ಚಿನ್ನದ ಓಲೆ ಆಫರ್.!

Sep 19, 2021, 9:23 AM IST

ಕೊಪ್ಪಳ (ಸೆ. 19):  ಕೊರೋನಾ ಲಸಿಕೆ ಹಾಕಿಸಲು ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ಏನೇನೋ ಆಫರ್‌ಗಳನ್ನು ನೀಡುತ್ತಿದೆ. ಲಸಿಕೆ ಹಾಕಿಸಿಕೊಂಡರೆ ಚಿನ್ನದ ಓಲೆ, ಸೀರೆ ಕೊಡುವುದಾಗಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆಯಿಂದ ವಿನೂತನ ಆಫರ್. ಲಸಿಕೆ ಹಾಕಿಸಿಕೊಂಡ 50 ಮಹಿಳೆಯರಿಗೆ ಸೀರೆ, ಒಬ್ಬ ಮಹಿಳೆಗೆ ಚಿನ್ನದ ಓಲೆ ನೀಡಲಾಗಿದೆ.