News Hour: ರಾಜ್ಯದ ಜನರ ಕೊರಳಲ್ಲಿ ಹುಲಿ ಉಗುರು ಹುಡುಕುತ್ತಾ ಕುಳಿತ ಅರಣ್ಯ ಇಲಾಖೆ!
ಬಹುಶಃ ಕರ್ನಾಟಕ ಅರಣ್ಯ ಇಲಾಖೆಗೆ ಈ ಒಂದು ವಾರದಲ್ಲಿ ಜನ ಬೈದಷ್ಟು ಮತ್ಯಾವ ಸಮಯದಲ್ಲೂ ಮಾತಾನಾಡಿರಲಿಕ್ಕಿಲ್ಲ. ದೊಡ್ಡ ಸಾಹಸ ಎನ್ನುವಂತೆ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಶೋಗೆ ಹೋಗಿ ಬಂಧಿಸಿದ್ದ ಅರಣ್ಯ ಇಲಾಖೆಗೆ ಆ ನಂತರ ಬಂದ ಒಂದೊಂದು ಕೇಸ್‌ಗಳು ತಲೆನೋವು ತಂದುಕೊಟ್ಟಿತು.
ಬೆಂಗಳೂರು (ಅ.27): ಹುಲಿ ಉಗುರಿನ ಕೇಸ್‌ನಲ್ಲಿ ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ ಮಾಡುವ ಇರಾದೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ರಾಜ್ಯದ ಜನರು ಹಾಗೂ ಮಾಧ್ಯಮಗಳಿಂದಲೇ ಛೀಮಾರಿ ಹಾಕಿಸಿಕೊಂಡಿದ್ದಾರೆ. ಹಾಗಿದ್ದರೂ, ರಾಜ್ಯದ ಜನರ ಕೊರಳಲ್ಲಿ ಹುಲಿ ಉಗುರು ಇದೆಯೇ ಇಲ್ಲವೇ ಎನ್ನುವುದನ್ನು ನೋಡವುದನ್ನು ಮಾತ್ರ ಮುಂದುವರಿಸಿದೆ.
ರಾಜ್ಯಾದ್ಯಂತ ಸರ್ಕಾರದ ಇಬ್ಬಗೆ ನೀತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹುಲಿ ಉಗುರು ಲಾಕೆಟ್ ಧರಿಸಿದ್ದ ಕೇಸ್‌ನಲ್ಲಿ ಅವರಿಗೆ ಬೇಲ್ ಸಿಕ್ಕಿದೆ. ಎರಡನೇ ಎಸಿಜೆಎಂ ಕೋರ್ಟ್‌ನಿಂದ ಶುಕ್ರವಾರ ಅವರಿಗೆ ಜಾಮೀನು ಲಭ್ಯವಾಗಿದೆ.
News Hour: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಆಪರೇಷನ್ ಹುಲಿ ಉಗುರು!
ಈ ನಡುವೆ ಶುಕ್ರವಾರ ಸಚಿವೆ ಹೆಬ್ಬಾಳ್ಕರ್ ಮಗ, ಅಳಿಯನ ಲಾಕೆಟ್ ವಶಕ್ಕೆ ಪಡೆಯಲಾಗಿದೆ. ಮಾಜಿ ಡಿಸಿಎಂ ಸವದಿ ಪುತ್ರನ ಕೊರಳಲ್ಲೂ ಲಾಕೆಟ್ ಕಂಡುಬಂದಿದೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗ್ತಿದ್ದಂತೆ ಸಚಿವರ ಮನೆಗೆ ಹೋಗಿ ಲಾಕೆಟ್ ನೀಡುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕಾರಣಿಗಳು ಯಥಾಪ್ರಕಾರದ ಇದು ನಕಲಿ ಪೆಂಡೆಂಟ್ ಎನ್ನುವ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.