ಐಟಿ ಮಹಾ ಶಿಕಾರಿ.. ಐಟಿ ಬಲೆಗೆ ಬಿದ್ದದ್ದು ಪಂಚರಾಜ್ಯ ಚುನಾವಣೆಗೆ ಹೋಗ್ತಿದ್ದ ದುಡ್ಡಾ..?

10 ದಿನಗಳ ಐಟಿ ದಾಳಿ..50 ಕಡೆ ಮೆಗಾ ರೇಡ್..100 ಕೋಟಿ ಸೀಜ್..!
ಸಿಕ್ಕಿದ್ದು ಯಾರ ದುಡ್ಡು..?ಪಾತ್ರಧಾರಿ ಯಾರು..?ಸೂತ್ರಧಾರಿ ಯಾರು..?
ಕೈ ವಿರುದ್ಧ ಕಮಿಷನ್ ಅಸ್ತ್ರ..ಐಟಿ ಬೇಟೆಯನ್ನೇ ಸಾಕ್ಷಿಯಾಗಿ ನೀಡಿದ ಬಿಜೆಪಿ

First Published Oct 17, 2023, 1:53 PM IST | Last Updated Oct 17, 2023, 1:53 PM IST

ಇದು ರಾಜ್ಯದಲ್ಲಿ ಈವರೆಗೆ ನಡೆದಿರೋ ಅತೀ ದೊಡ್ಡ ಐಟಿ ಶಿಕಾರಿ. ಐಟಿ ಬೇಟೆಯಲ್ಲಿ ಬಲೆಗೆ ಬಿದ್ದಿರೋದು 100 ಕೋಟಿ ಹಾರ್ಡ್ ಕ್ಯಾಶ್. ಗುತ್ತಿಗೆದಾರರ ರಹಸ್ಯ ಕೋಟೆಯನ್ನು ಬಗೆದಾಗ ಸಿಕ್ಕಿದ್ದು ಕೋಟಿ ಕೋಟಿ ದುಡ್ಡಿನ ಕಂತೆ. ರಾಜ್ಯದಲ್ಲೀಗ ಝಣ ಝಣ ಕಾಂಚಾಣದಲ್ಲೇ ಸುದ್ದಿ. ಅಲ್ಲಿ 40 ಕೋಟಿ ಸಿಕ್ತು, ಇಲ್ಲಿ 45 ಕೋಟಿ ಸಿಕ್ತು. ಮಂಚದ ಕೆಳಗೆ ಬಾಕ್ಸ್‌ಗಟ್ಟಲೇ ದುಡ್ಡು, ಟ್ರಂಕ್‌ಗಳಲ್ಲಿ ಕಂತೆ ಕಂತೆ ಹಣ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಇದೇ ಸುದ್ದಿ, ಇದೇ ಸದ್ದು. ಇದೇ ಈಗ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಕಿಚ್ಚು ಹೊತ್ತಿಸಿರೋದು. ಪ್ರಚಂಡ ಬಹುಮತದ ಕಾಂಗ್ರೆಸ್(Congress) ಸರ್ಕಾರವನ್ನು ಎದುರಿಸಲು ಬಿಜೆಪಿಗೆ(BJP) ಸಿಕ್ಕಿರೋ ಬಹುದೊಡ್ಡ ಅಸ್ತ್ರವೇ ಈ 100 ಕೋಟಿಗಳ ಐಟಿ ಶಿಕಾರಿ. ಐಟಿ ದಾಳಿಯಲ್ಲಿ(IT Raid) ಸಿಕ್ಕಿರೋ 100 ಕೋಟಿ ಕಾಂಚಾಣದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಅಂತ ಬಿಜೆಪಿ ನಾಯಕರು ನೇರವಾಗಿ ಆರೋಪಿಸ್ತಾ ಇದ್ದಾರೆ. ಬಿಜೆಪಿಯ ಈ ಆರೋಪ ಎರಡೂ ಪಕ್ಷಗಳ ಮಧ್ಯೆ ದೊಡ್ಡ ಜಟಾಪಟಿಗೆ ಕಾರಣವಾಗಿದೆ. ಒಬ್ಬರು ಟಕ್ಕರ್ ಕೊಟ್ರೆ, ಇನ್ನೊಬ್ರು ಕೌಂಟರ್ ಕೊಡ್ತಿದ್ದಾರೆ. ಒಬ್ರದ್ದು ಏಟು, ಮತ್ತೊಬ್ರದ್ದು ಛಡಿಯೇಟು.

ಇದನ್ನೂ ವೀಕ್ಷಿಸಿ:  ಗಾಜಾಪಟ್ಟಿಯಲ್ಲಿ ಮನುಕುಲದ ಮಹಾವಲಸೆ: ಲೆಬನಾನ್, ಸಿರಿಯಾದಿಂದಲೂ ಇಸ್ರೇಲ್ ವಿರುದ್ಧ ಹೋರಾಟ ?