ಅಯ್ಯಯ್ಯೋ.. ಬೆಂಗಳೂರಿಗೂ ಕಾಲಿಟ್ಟ ಮಿಡತೆ ರೀತಿಯ ಕೀಟಗಳು..!
ಉತ್ತರ ಭಾರತದಲ್ಲಿ ಮಿಡತೆಗಳ ದಾಳಿ ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದನ್ನು ದಿನ ನಿತ್ಯ ಕೇಳುತ್ತಲೇ ಇದ್ದೇವೆ. ಮಿಡತೆಗಳ ದಾಳಿ ದೇಶದ ಆರ್ಥಿಕ ಭದ್ರತೆಯ ಮೇಲೆ ಬಹುದೊಡ್ಡ ಸವಾಲೆಸೆದಿದೆ.
ಬೆಂಗಳೂರು(ಮೇ.28): ಒಂದು ಕಡೆ ಕೊರೋನಾ ಎನ್ನುವ ಹೆಮ್ಮಾರಿಯ ಕಾಟದಿಂದ ತತ್ತರಿಸಿರುವ ಬೆಂಗಳೂರಿಗರಿಗೆ ಇದೀಗ ಮತ್ತೊಂದು ತಲೆ ನೋವು ಶುರುವಾಗಿದೆ.
ಉತ್ತರ ಭಾರತದಲ್ಲಿ ಮಿಡತೆಗಳ ದಾಳಿ ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದನ್ನು ದಿನ ನಿತ್ಯ ಕೇಳುತ್ತಲೇ ಇದ್ದೇವೆ. ಮಿಡತೆಗಳ ದಾಳಿ ದೇಶದ ಆರ್ಥಿಕ ಭದ್ರತೆಯ ಮೇಲೆ ಬಹುದೊಡ್ಡ ಸವಾಲೆಸೆದಿದೆ. ಲಾಕ್‌ಡೌನ್‌ನಿಂದಾಗಿ ಜನ ಊಟಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮಿಡತೆ ಏನನ್ನಾದರೂ ಉಳಿಸಿದರೆ ಜನ ಹಸಿವಿನಿಂದ ಪರದಾಡುವುದು ತಪ್ಪಲಿದೆ.
ಹೊಸ ಮಾರ್ಗಸೂಚಿಗಳೊಂದಿಗೆ ಶಾಲೆ ಪ್ರಾರಂಭಿಸಲು ಚಿಂತನೆ: ಯಾವಾಗಿನಿಂದ..?
ಹೀಗಿರುವಾಗಲೇ ಮಿಡತೆಯನ್ನು ಹೋಲುವ ಕೀಟಗಳು ಇಂದಿರಾ ನಗರಕ್ಕೆ ದಾಂಗುಡಿಯಿಟ್ಟಿವೆ. ದೊಡ್ಡ ದೊಡ್ಡ ಕೀಟಗಳನ್ನು ಕಂಡು ಉದ್ಯಾನನಗರಿಯ ಮಂದಿ ಬೆಚ್ಚಿ ಬಿಚ್ಚಿದ್ದಿದ್ದಾರೆ. ಈ ಕುರಿತಾದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.