ಬೆಂಗಳೂರು, (ಮೇ.28): ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿರುವುದರಿಂದ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭವಾಗುತ್ತದೆ ಎಂಬ ಗೊಂದಲ ಮುಂದುವರಿದಿದೆ.

ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ರಾಜ್ಯದಲ್ಲಿ ಹಲವಾರು ಸಡಿಲಿಕೆಗಳನ್ನು ಮಾಡಲಾಗಿದೆ. ಈಗಾಗಲೇ ಕೈಗಾರಿಕೆಗಳು, ಬಸ್‌ ಸಂಚಾರ ಆರಂಭಗೊಂಡಿದ್ದು ಅಂಗಡಿ ಮುಂಗಟ್ಟುಗಳು ತೆರೆದಿವೆ, ಸಾರಿಗೆ ಸಂಚಾರ ಶುರುವಾಗಿದೆ. ಅಷ್ಟೇ ಅಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಮೂಹೂರ್ತ ಫಿಕ್ಸ್ ಆಗಿದೆ. ಅದರಂತೆ ಜೂನ್‌ 1ರಿಂದ ಶಾಲೆಗಳನ್ನು ಪ್ರಾರಂಭಿಸುವ ಚಿಂತನೆಗಳು ನಡೆದಿವೆ.

ಉನ್ನತ ಶಿಕ್ಷಣ ಇಲಾಖೆ ಮೀಟಿಂಗ್ ಅಂತ್ಯ: ಸಭೆಯ ಮುಖ್ಯಾಂಶಗಳು ಇಲ್ಲಿವೆ

ಹೊಸ ಮಾರ್ಗ ಸೂಚಿಗಳೊಂದಿಗೆ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆದಿದ್ದು, ಜೂನ್ 1ರ ಬಳಿಕ ಪ್ರಾಥಮಿಕ, ಪ್ರೌಡ ಶಾಲೆ ವಿಧ್ಯಾರ್ಥಿಗಳ ಶೈಕ್ಷಣಿಕ ವರ್ಷ ಆರಂಭಗುವ ಸಾಧ್ಯತೆಗಳಿವೆ. ಈ ಬಗ್ಗೆ ತಜ್ಜರ ಸಮಿತಿ ತಂಡ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದು, ಶಿಫ್ಟ್ ಆಧಾರದ ಮೇಲೆ ತರಗತಿ ನಡೆಸಲು ಸಲಹೆ ಕೊಟ್ಟಿದೆ.

*ಶಿಫ್ಟ್ ಆಧಾರದ ಮೇಲೆ ತರಗತಿಗಳು ನಡೆಸುವುದು. 
* ಮೂರು ದಿನಗಳ ಒಂದು ಬ್ಯಾಚ್ ಮಾಡಿ ತರಗತಿ ನಡೆಸುವುದು. 
* ಶಾಲೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದು.
* ವಿದ್ಯಾರ್ಥಿಗಳ ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ
* ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ಹಾಗೂ ಸ್ಕ್ರೀನಿಂಗ್ ಚೆಕ್ ಮಾಡುವುದು ಸೇರಿದಂತೆ ಹಲವು ಅಂಶಗಳವುಳ್ಳ ತಜ್ಜರಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಲಾಕ್‌ಡೌನ್ ಫುಲ್ ಸಡಿಲಿಕೆ ಮಾಡಲಾಗಿದ್ದು, ಸಾಮಾಜಿಕ ಅಂತರ ಖಾಯ್ದುಕೊಂದು ಹೊಸ ನಿಯಮಾವಳಿಗಳನ್ನ ಮಾಡಿಕೊಂಡು ಶಾಲೆಗಳು ಓಪನ್ ಆಗ್ತಾವಾ ಎನ್ನುವುದನ್ನು ಕಾದು ನೋಡಬೇಕಿದೆ. 

ಇನ್ನು ಲಾಕ್‌ಡೌನ್ ಸಡಿಲಕೆ ಮಾಡದಾಗಿನಿಂದ ಕೋವಿಡ್‌-19 ತೀವ್ರವಾಗಿ ಹೆಚ್ಚಳವಾಗುತ್ತಿದೆ. ಇದನ್ನು ನಿಯಂತ್ರಣ ಮಾಡುವುದು ಸರ್ಕಾರದ ಪಾಲಿಗೆ ಸವಾಲಾಗಿದೆ ಪರಿಣಮಿಸಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ನಿಲುವಿಗೆ ಬದ್ಧವಾಗುವ ಸೂಚನೆಯನ್ನು ನೀಡುತ್ತಿದೆ. ಮೇ 31 ರ ಬಳಿಕ ಲಾಕ್‌ಡೌನ್ ಕುರಿತಾಗಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ರಾಜ್ಯದಲ್ಲಿ ಜಾರಿಗೆ ತರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.