ರೋಹಿಣಿ, ರೂಪಾ ಬ್ರಹನ್ನಾಟಕಕ್ಕೆ ತೆರೆ ಎಳೆದ ಸರ್ಕಾರ, ಟ್ರಾನ್ಸಫರ್ ಶಿಕ್ಷೆ!
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ನಡುವೆ ವೈಯಕ್ತಿಕ ವಿಚಾರದಲ್ಲಿ ವಾಕ್ಸಮರ ನಡೆಯುತ್ತಿತ್ತು. ಮಂಗಳವಾರ ಸರ್ಕಾರ ಇದಕ್ಕೆ ಫುಲ್ ಸ್ಟಾಪ್ ನೀಡಿದ್ದು ಇವರಿಬ್ಬರೊಂದಿಗೆ ರೂಪಾ ಅವರ ಪತಿ ಮನೀಷ್ ಮೌದ್ಗೀಲ್ ಅವರಿಗೂ ವರ್ಗಾವಣೆ ಶಿಕ್ಷೆ ನೀಡಿದೆ.
ಬೆಂಗಳೂರು (ಫೆ.21): ರಾಜ್ಯದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಬೀದಿ ರಂಪಾಟಕ್ಕೆ ಸರ್ಕಾರ ಮಂಗಳವಾರ ಫುಲ್‌ಸ್ಟಾಪ್ ಇಟ್ಟಿದೆ. ಈ ಇಬ್ಬರು ಅಧಿಕಾರಿಗಳೊಂದಿಗೆ ರೂಪಾ ಅವರ ಪತಿ ಮನೀಷ್ ಮೌದ್ಗಿಲ್ ಅವರನ್ನೂ ಎತ್ತಂಗಡಿ ಮಾಡಿದೆ. ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸ್ಥಳ ಸೂಚಿಸದೇ ಸರ್ಕಾರ ವರ್ಗಾವಣೆ ಶಿಕ್ಷೆ ನೀಡಿದೆ.
ನಿಯಮ ಮೀರಿ ವರ್ತನೆ ತೋರಿದ್ದ ರಾಜ್ಯದ ಉನ್ನತ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರಿಗೆ ಸರ್ಕಾರ ವರ್ಗಾವಣೆ ಮಾಡಿದ್ದರೂ, ಸ್ಥಳ ನಿಯೋಜನೆ ಮಾಡಿಲ್ಲ. ಆದರೆ, ಮನೀಷ್ ಮೌದ್ಗಿಲ್‌ಗೆ ಸ್ಥಳ ನಿಗದಿ ಮಾಡಿದೆ. ಹಾಗಂತ ರಾಜ್ಯದಲ್ಲಿ ಹಿರಿಯ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳಿಗೆ ನಿಯಮ ಮೀರಿದ್ದಕ್ಕಾಗಿ ವರ್ಗಾವಣೆ ಮಾಡಿದ್ದು ಇದೇ ಮೊದಲೇನಲ್ಲ.
ರೋಹಿಣಿಗೆ ಹೋದಲೆಲ್ಲಾ ವಿವಾದವೇ 'ಸಿಂಧೂರ'!
ಬೀದಿ ರಂಪಾಟ ಮಾಡಿ ರಾಜ್ಯದ ಮರ್ಯಾದೆಯನ್ನು ಹರಾಜು ಮಾಡಿದ್ದ ಹಿರಿಯ ಮಹಿಳಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರ್ಕಾರ ಆದೇಶ ಹೊರಡಿಸಿದೆ. ಸೋಮವಾರ ಈ ಕುರಿತಾಗಿ ವಾರ್ನ್ ಮಾಡಿದ್ದಸರ್ಕಾರ, ಇಂದು ಬೆಳಗ್ಗೆ ನೋಟಿಸ್ ನೀಡಿದ್ದರೆ, ಮಧ್ಯಾಹ್ನದ ವೇಳೆ ಟ್ರಾನ್ಸ್‌ಫರ್ ಶಿಕ್ಷೆ ನೀಡಿದೆ.