ಮನೆಗಳಲ್ಲಿ ಹೇಗೆ ಅಳವಡಿಸಬೇಕು ಗ್ಯಾಸ್ ಗೀಝರ್, ಹೇಗಿದ್ದರೆ ಸುರಕ್ಷಿತ? ಇಲ್ಲಿದೆ ರಿಯಾಲಿಟಿ ಚೆಕ್.!

- ಮನೆಯ ಹಿತ್ತಲಲ್ಲಿದ್ದರೇ ಬೆಸ್ಟ್ ಗ್ಯಾಸ್ ಗೀಝರ್, ಮನೆಯ ಒಳಗೆ ಇರಬೇಕು ಸ್ನಾನದ ಕೋಣೆ

- ಸ್ನಾನದ ಕೋಣೆಯಲ್ಲೆ ಗ್ಯಾಸ್ ಗೀಝರ್ ಇದ್ದರೇ ಅಪಾಯ ಕಟ್ಟಿಟ್ಟ ಬುತ್ತಿ

- ಹಿತ್ತಲಲ್ಲಿ ಗ್ಯಾಸ್ ಗೀಝರ್‌ ಅಳವಡಿಸಿ, ಬಿಸಿ ನೀರು ಸ್ನಾನದ ಕೋಣೆಗೆ ಬರುವಂತಿಬೇಕು

First Published Sep 9, 2021, 12:05 PM IST | Last Updated Sep 9, 2021, 12:05 PM IST

ಬೆಂಗಳೂರು (ಸೆ. 09): ಗೀಸರ್‌ ಅನಿಲ ಸೋರಿಕೆಯಾಗಿ ವೈದ್ಯಕೀಯ ವಿದ್ಯಾರ್ಥಿನಿ,  ಮಹಾಲಕ್ಷ್ಮಿ ಲೇಔಟ್‌ ನಿವಾಸಿ ಸಂಪದಾ (23) ಮೃತಪಟ್ಟಿದ್ದಾರೆ. ಮನೆಗಳಲ್ಲಿ  ಗ್ಯಾಸ್ ಗೀಝರ್ ಹೇಗೆ ಅಳವಡಿಸಬೇಕು? ಹೇಗೆ ಅಳವಡಿಸಿದ್ರೆ ಸುರಕ್ಷಿತ? ಎಂದು ರಿಯಾಲಿಟಿ ಚೆಕ್ ಮೂಲಕ ಏಷ್ಯಾನೆಟ್ ಸುವರ್ಣ ನ್ಯೂಸ್ ತೋರಿಸುತ್ತಿದೆ. 

ಗ್ಯಾಸ್ ಗೀಸರ್ ಸೈಲೆಂಟ್ ಕಿಲ್ಲರ್.. ಮುನ್ನೆಚ್ಚರಿಕೆ ಕ್ರಮ ಏನೇನು?

ಗ್ಯಾಸ್ ಗೀಝರ್ ಮನೆಯ ಹಿತ್ತಲಲ್ಲಿದ್ದರೇ ಬೆಸ್ಟ್. ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಝರ್ ಅಳವಡಿಸುವುದು ಸೂಕ್ತವಲ್ಲ. ಹಿತ್ತಲಲ್ಲಿ ಗ್ಯಾಸ್ ಗೀಝರ್‌ ಅಳವಡಿಸಿ, ಬಿಸಿ ನೀರು ಸ್ನಾನದ ಕೋಣೆಗೆ ಬರುವಂತಿದ್ದರೆ ಅಪಾಯದಿಂದ ದೂರವಿರಬಹುದು.