Asianet Suvarna News Asianet Suvarna News

ಕೊರೊನಾ ನಿರ್ವಹಣೆಯಲ್ಲಿ ಬಿಬಿಎಂಪಿ ನಂಬಿಕೊಂಡ್ರೆ ಅಷ್ಟೇ: ಹೈಕೋರ್ಟ್‌ ಕಿಡಿ

ಬೆಂಗಳೂರಿನಲ್ಲಿ ಕೊರೋನಾ ನಿರ್ವಹಣೆ ಹಾಗೂ ಕಂಟೈನ್ಮೆಂಟ್‌ ವಲಯಗಳಲ್ಲಿ ಮಾರ್ಗಸೂಚಿಗಳ ಅನುಷ್ಠಾನ ಮತ್ತು ಅಲ್ಲಿನ ಬಡವರಿಗೆ ಆಹಾರ ಕಿಟ್‌ ತಲುಪಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂದು ಹೈಕೋರ್ಟ್ ಕೆಂಡಾಮಂಡಲವಾಗಿದೆ. 

ಬೆಂಗಳೂರು (ಜು. 14): ನಗರದಲ್ಲಿ ಕೊರೋನಾ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ಎಲ್ಲಾ ಹಂತಗಳಲ್ಲಿ ವಿಫಲವಾಗಿದೆ. ಯಾವ ಆದೇಶ ನೀಡಿದರೂ ಪಾಲಿಕೆಯ ಕಾರ್ಯವೈಖರಿ ಬದಲಾಗುವ ಲಕ್ಷಣಗಳು ಇಲ್ಲ. ಬಿಬಿಎಂಪಿ ಇಂದು ಸಲ್ಲಿಸಿರುವ ಲಿಖಿತ ವಾದವೊಂದೇ ಸಾಕು ಈ ಸಂಸ್ಥೆಯನ್ನು ಅಮಾನತಿಗೆ ಶಿಫಾರಸ್ಸು ಮಾಡಲು. ಪಾಲಿಕೆಯ ವೈಫಲ್ಯ ಅನೇಕ ಪ್ರಕರಣಗಳಲ್ಲಿ ಕೋರ್ಟ್‌ ಗಮನಕ್ಕೆ ಬಂದಿದೆ. ಹೀಗಾಗಿ, ರಾಜ್ಯ ಸರ್ಕಾರ ನಗರದಲ್ಲಿನ ಕಂಟೈನ್ಮೆಂಟ್‌ ವಲಯ ನಿರ್ವಹಣಾ ಜವಾಬ್ದಾರಿಯನ್ನು ತಾನೇ ನಿರ್ವಹಣೆ ಮಾಡಬೇಕು. ಈಗಾಗಲೇ ನಗರದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಬಿಬಿಎಂಪಿಯನ್ನು ನಂಬಿಕೊಂಡು ಕೂತರೇ ಇನ್ನೂ ಭೀಕರ ಸ್ಥಿತಿಗೆ ನಗರ ತಲುಪಲಿದೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ. 

ಪಾಸಿಟಿವ್ ಬಂದು 6 ದಿನಗಳಾದ್ರೂ ಟ್ರೀಟ್‌ಮೆಂಟೇ ಇಲ್ಲ; ಸಿಎಂ ಸಾಹೇಬ್ರೆ ಗಮನಿಸಿ..!