Asianet Suvarna News Asianet Suvarna News

ಹೋಟೆಲ್ ದರ ಏರಿಕೆ ಮಾತ್ರ ಇಳಿಕೆ ಏಕಿಲ್ಲ: ಬ್ಯಾಚುಲರ್ಸ್ ಪರ ಕೋರ್ಟ್ ಮೆಟ್ಟಿಲೇರಿದ ವಕೀಲ!

ಹೋಟೆಲ್ ದರ ಹೆಚ್ಚಳದ ಬೆನ್ನಲ್ಲೇ ಹೋಟೆಲ್ ಮಾಲಿಕರಿಗೆ ಹೈಕೋರ್ಟ್ ವಕೀಲ ಪ್ರಶಾಂತ್ ಮೇಥಲ್ ಶಾಕ್ ನೀಡಿದ್ದಾರೆ. ತರಕಾರಿ, ಹಾಲಿನ ದರ ಹೆಚ್ಚಳವಾದಾಗ ಹೋಟೆಲ್ ಆಹಾರ ಪದಾರ್ಥಗಳ ದರವೂ ಹೆಚ್ಚಳವಾಗುತ್ತದೆ. 

ಬೆಂಗಳೂರು (ಆ.04): ಹೋಟೆಲ್ ದರ ಹೆಚ್ಚಳದ ಬೆನ್ನಲ್ಲೇ ಹೋಟೆಲ್ ಮಾಲಿಕರಿಗೆ ಹೈಕೋರ್ಟ್ ವಕೀಲ ಪ್ರಶಾಂತ್ ಮೇಥಲ್ ಶಾಕ್ ನೀಡಿದ್ದಾರೆ. ತರಕಾರಿ, ಹಾಲಿನ ದರ ಹೆಚ್ಚಳವಾದಾಗ ಹೋಟೆಲ್ ಆಹಾರ ಪದಾರ್ಥಗಳ ದರವೂ ಹೆಚ್ಚಳವಾಗುತ್ತದೆ. ಇತ್ತೀಚೆಗೆ ಗ್ಯಾಸ್ ಬೆಲೆ ಇಳಿಕೆಯಾಯ್ತು, ಆಗ ಬೆಲೆ ಇಳಿಕೆ ಯಾಕಾಗಿಲ್ಲ ಎಂದು ಸಿಎಂಗೆ ಹೈಕೋರ್ಟ್ ವಕೀಲ ಪ್ರಶಾಂತ್ ಮೇಥಲ್ ಪತ್ರ ಬರೆದಿದ್ದಾರೆ. ಹೋಟೆಲ್ ದರ ಯಾವತ್ತೂ ಇಳಿದಿಲ್ಲ ಯಾಕೆ? ಹಾಗಾಗಿ ಬೆಲೆ ನಿಯಂತ್ರಣ ಮಾಡೋದು ರಾಜ್ಯ ಸರ್ಕಾರದ ಕರ್ತವ್ಯ. ಸಾಕಷ್ಟು ಬ್ಯಾಚುಲರ್ಸ್ ಗಳು ಹೋಟೆಲ್ ಅನ್ನೇ ನಂಬಿದ್ದಾರೆ.

ದರ ಏರಿಕೆಗೆ ಕಡಿವಾಣ ಇಲ್ಲದೇ ಇರುವುದರಿಂದ ಅನೇಕರಿಗೆ ತೊಂದರೆಯಾಗಲಿದೆ. ಇದಕ್ಕಾಗಿ ಈ ಬೆಲೆ ನಿಯಂತ್ರಣಕ್ಕಾಗಿ ಸಮಿತಿ ರಚನೆ ಮಾಡುವಂತೆ ಕೋರಿ ಸಿಎಂ, ಆಹಾರ ಸಚಿವರಿಗೆ ವಕೀಲರು ಪತ್ರ ಬರೆದಿದ್ದಾರೆ. ಹೋಟೆಲ್ ಮಾಲಿಕರ ಸಂಘದವರಿಗೂ ಪತ್ರ ಕಳುಹಿಸಲಾಗಿದ್ದು, ಒಂದು ವೇಳೆ ಸಮಿತಿ ರಚಿಸದಿದ್ದಲ್ಲಿ ವಕೀಲನಾಗಿ  ನ್ಯಾಯಾಂಗ ಹೋರಾಟ ಮಾಡುತ್ತೇನೆ. ಹೈಕೋರ್ಟ್ ನಲ್ಲಿ PIL ದಾಖಲಿಸಿ ನ್ಯಾಯಾಂಗ ಹೋರಾಟ ಮಾಡುತ್ತೇವೆ ಎಂದು ಪ್ರಶಾಂತ್ ಮೇಥಲ್ ತಿಳಿಸಿದರು.