ಮಳೆರಾಯ ನಿನ್ನ ಮನೆಕಾಯ! ರಾಜ್ಯದಾದ್ಯಂತ ಮತ್ತೆ ಧಾರಾಕಾರ ಮಳೆ ಶುರು

ಕರ್ನಾಟಕದಾದ್ಯಂತ ವರುಣನ ಆರ್ಭಟ ಮತ್ತೆ ಶುರುವಾಗಿದೆ. ಸ್ವಲ್ಪ ಸಮಯ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರ ಶುರು ಮಾಡಿದ್ದಾನೆ. ಉಡುಪಿ, ರಾಯಚೂರು, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. 

First Published Sep 20, 2020, 3:39 PM IST | Last Updated Sep 20, 2020, 3:39 PM IST

ಬೆಂಗಳೂರು (ಸೆ. 20): ಕರ್ನಾಟಕದಾದ್ಯಂತ ವರುಣನ ಆರ್ಭಟ ಮತ್ತೆ ಶುರುವಾಗಿದೆ. ಸ್ವಲ್ಪ ಸಮಯ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರ ಶುರು ಮಾಡಿದ್ದಾನೆ. ಉಡುಪಿ, ರಾಯಚೂರು, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. 

ಡ್ರಗ್ಸ್ ನಶೆಯ ನಂಟಲ್ಲಿ ನಿರೂಪಕ ಅಕುಲ್, ಸಂತೋಷ್‌ ಇರೋದು ಸತ್ಯವೇ?

ಭಾರೀ ಮಳೆಯಿಂದಾಗಿ ಕೆಲವು ಕಡೆ ಸೇತುವೆಗಳು ಮುಳುಗಡೆಯಾಗಿವೆ. ಕೆಲವು ಕಡೆ ಬೆಳೆ ನಾಶವಾಗಿದೆ. ಜಮೀನುಗಳಿಗೆ ನೀರು ನುಗ್ಗಿದೆ. ರೈತರು ಕಂಗಾಲಾಗಿದ್ದಾರೆ. ಈಗಾಗಲೇ ವರುಣನ ಆರ್ಭಟದಿಂದ ಸಾಕಷ್ಟು ಹಾನಿಗಳಾಗಿವೆ. ಬೆಳೆ ನಾಶವಾಗಿದೆ. ಕೊಂಚ ಬಿಡುವು ಕೊಟ್ಟಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಇದೀಗ ಮತ್ತೆ ಅಬ್ಬರ ಶುರು ಮಾಡಿದ್ಧಾನೆ ವರುಣ. ಎಲ್ಲೆಲ್ಲಿ ಯಾವ್ಯಾವ ಸ್ಥಿತಿ ನಿರ್ಮಾಣವಾಗಿದೆ ನೊಡೋಣ ಬನ್ನಿ..!