ಪ್ರಶಾಂತ್‌ ಹತ್ಯೆಯಲ್ಲಿ ಸಿಪಿಐ ರೇಣುಕಾ ಪ್ರಸಾದ್ ಕೈವಾಡ? ರೇವಣ್ಣ ಗಂಭೀರ ಆರೋಪ

'ಹಾಸನ CPI ರೇಣುಕಾ ಪ್ರಸಾದ್ ಕೈವಾಡ ಇದೆ. ಅವರನ್ನು ಸಸ್ಪೆಂಡ್ ಮಾಡಬೇಕು, ಇಲ್ಲವೇ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಎಂಎಲ್‌ಸಿ ಮಾಡಿ. ಪ್ರಶಾಂತ್ ಹತ್ಯೆ ಕೇಸನ್ನು ಸಿಬಿಐಗೆ ವಹಿಸಬೇಕು. CPI ರೇಣುಕಾ ಪ್ರಸಾದ್ ಸಪೋರ್ಟ್ ಇಲ್ಲದೇ ಹತ್ಯೆ ಆಗಲ್ಲ, ಇವರ ಹಿಂದೆ ಪಕ್ಷಗಳ ಬೆಂಬಲವೂ ಇದೆ'  ಎಂದು ಶಾಸಕ ರೇವಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 
 

First Published Jun 2, 2022, 3:23 PM IST | Last Updated Jun 2, 2022, 3:27 PM IST

ಹಾಸನ (ಜೂ. 02):  'CPI ರೇಣುಕಾ ಪ್ರಸಾದ್ (Renuka Prasad) ಕೈವಾಡ ಇದೆ. ಅವರನ್ನು ಸಸ್ಪೆಂಡ್ ಮಾಡಬೇಕು, ಇಲ್ಲವೇ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಎಂಎಲ್‌ಸಿ ಮಾಡಿ. ಪ್ರಶಾಂತ್ ಹತ್ಯೆ ಕೇಸನ್ನು ಸಿಬಿಐಗೆ ವಹಿಸಬೇಕು. CPI ರೇಣುಕಾ ಪ್ರಸಾದ್ ಸಪೋರ್ಟ್ ಇಲ್ಲದೇ ಹತ್ಯೆ ಆಗಲ್ಲ, ಇವರ ಹಿಂದೆ ಪಕ್ಷಗಳ ಬೆಂಬಲವೂ ಇದೆ'  ಎಂದು ಶಾಸಕ ರೇವಣ್ಣ (HD Revanna) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಹಾಸನ ನಗರಸಭೆ JDS ಸದಸ್ಯ ಪ್ರಶಾಂತ್ ಹತ್ಯೆ, ನಗರದಲ್ಲಿ ಭಯದ ವಾತಾವರಣ

ಆಟೋದಲ್ಲಿ ಬಂದ ಹಂತಕರು ಹಾಡಹಗಲೇ ಹಾಸನ ನಗರಸಭಾ ಸದಸ್ಯ  ಪ್ರಶಾಂತ್‌ರನ್ನು ಬರ್ಬರವಾಗಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿದರು. ಘಟನೆಯಿಂದ ಇಡೀ ಹಾಸನ ಬೆಚ್ಚಿಬಿದ್ದಿದೆ. ಪ್ರಶಾಂತ್‌ ತಮ್ಮ ತಮ್ಮ ಮನೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ನಗರದ ಜವೇನಹಳ್ಳಿ ಮಠದ ಸಮೀಪ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ಹಂತಕರು ಅಡ್ಡಗಟ್ಟಿಮನಸೋಯಿಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಅವರ ಎರಡೂ ಮುಂಗೈಗಳು ತುಂಡಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಹತ್ಯೆಗೀಡಾಗಿರುವ ಪ್ರಶಾಂತ್‌ ತಂದೆ ಹಾ.ರಾ.ನಾಗರಾಜ್‌ ಕೂಡ ನಗರಸಭೆ ಸದಸ್ಯರಾಗಿದ್ದವರು.