Raitha Rathna: ರೈತ ಮಹಿಳೆಯ ಟ್ರಾಕ್ಟರ್ ಕನಸು ನನಸು ಮಾಡಿದ ಕೃಷಿ ಸಚಿವ ಬಿ ಸಿ ಪಾಟೀಲ್

ಕನ್ನಡಪ್ರಭ- ಸುವರ್ಣನ್ಯೂಸ್‌ನಿಂದ ಇತ್ತೀಚೆಗೆ ಆಯೋಜಿಸಿದ್ದ ‘ರೈತ ರತ್ನ ಪ್ರಶಸ್ತಿ’ಸಮಾರಂಭದಲ್ಲಿ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ರೈತ ಮಹಿಳೆ ಮಹದೇವಕ್ಕ ಲಿಂಗದಹಳ್ಳಿ ಅವರಿಗೆ ನೀಡಿದ್ದ ಭರವಸೆಯಂತೆ ಕೃಷಿ ಸಚಿವ ಬಿ.ಸಿ. ಪಾಟೀಲ ಟ್ರ್ಯಾಕ್ಟರ್‌ ಕೊಡಿಸಿ ನುಡಿದಂತೆ ನಡೆದುಕೊಂಡಿದ್ದಾರೆ.

First Published Mar 20, 2022, 4:09 PM IST | Last Updated Mar 20, 2022, 4:09 PM IST

ಹಾವೇರಿ (ಮಾ. 20): ಕನ್ನಡಪ್ರಭ- ಸುವರ್ಣನ್ಯೂಸ್‌ನಿಂದ ಇತ್ತೀಚೆಗೆ ಆಯೋಜಿಸಿದ್ದ ‘ರೈತ ರತ್ನ ಪ್ರಶಸ್ತಿ’ಸಮಾರಂಭದಲ್ಲಿ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ರೈತ ಮಹಿಳೆ ಮಹದೇವಕ್ಕ ಲಿಂಗದಹಳ್ಳಿ ಅವರಿಗೆ ನೀಡಿದ್ದ ಭರವಸೆಯಂತೆ ಕೃಷಿ ಸಚಿವ ಬಿ.ಸಿ. ಪಾಟೀಲ ಟ್ರ್ಯಾಕ್ಟರ್‌ ಕೊಡಿಸಿ ನುಡಿದಂತೆ ನಡೆದುಕೊಂಡಿದ್ದಾರೆ.

ಮಹದೇವಕ್ಕ ಅವರೇ ಇಡಿ ಕುಟುಂಬವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ತಮ್ಮ 5 ಎಕರೆ ಹೊಲವನ್ನು ಸ್ವತಃ ಉಳುಮೆ ಮಾಡುತ್ತಿದ್ದಾರೆ. ಅಂಗವಿಕಲರಾಗಿರುವ ಮೂವರು ಸಹೋದರಿಯರನ್ನು ಪೋಷಿಸುವ ಜವಾಬ್ದಾರಿಯೊಂದಿಗೆ ಕೃಷಿಯನ್ನು ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ ಮಹದೇವಕ್ಕ. ತಮಗೊಂದು ಟ್ರ್ಯಾಕ್ಟರ್‌ ಕೊಡಿಸಿದರೆ ಅನುಕೂಲವಾಗುತ್ತದೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹದೇವಕ್ಕ ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ತಮ್ಮ ಕೃಷಿ ಸಂಕಷ್ಟಗಳನ್ನು ಹೇಳಿಕೊಂಡಿದ್ದ ಅವರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಟ್ರ್ಯಾಕ್ಟರ್‌ ಕೊಡಿಸುವ ಭರವಸೆ ನೀಡಿದ್ದರು. ಇದೀಗ ಸಚಿವ ಬಿ.ಸಿ.ಪಾಟೀಲ್‌ ಇದೀಗ .2 ಲಕ್ಷ ಸ್ವಂತ ಕೈಯಿಂದ ಕಟ್ಟಿ, ಇನ್ನುಳಿದ .8 ಲಕ್ಷ ಅನುದಾನವನ್ನು ಸರ್ಕಾರದಿಂದ ಕೊಡಿಸುವ ಮೂಲಕ ಮಹದೇವಕ್ಕ ಅವರಿಗೆ ಟ್ರಾಕ್ಟರ್‌ ಕೊಡಿಸಿದ್ದಾರೆ.