ರಾಜ್ಯಾದ್ಯಂತ ಹೇಗಿತ್ತು "ಗೃಹಲಕ್ಷ್ಮಿ" ಸಂಭ್ರಮ..? ಲಕ್ಷ ಲಕ್ಷ ಮಹಿಳೆಯರ ಮುಂದೆ ಗೃಹಲಕ್ಷ್ಮಿ ಅನಾವರಣ..!

ಮನೆ ಮನೆಗೆ ಬಂದೇ ಬಿಟ್ಟಳು ಗೃಹಲಕ್ಷ್ಮಿ..!
100 ದಿನ..4 ಗ್ಯಾರಂಟಿ..ಕೈ ರಣಕಹಳೆ..!
ರಾಜ್ಯಾದ್ಯಂತ ಹೇಗಿತ್ತು ಗೃಹಲಕ್ಷ್ಮಿ ಸಂಭ್ರಮ..?
 

First Published Aug 31, 2023, 3:26 PM IST | Last Updated Aug 31, 2023, 3:26 PM IST

ಜಾರಿಗೆ ಬಂತು ಸಿದ್ದು ಸರ್ಕಾರದ ಅತೀ ದೊಡ್ಡ ಯೋಜನೆ. ರಾಜ್ಯದ ಮಹಿಳೆಯರಿಗೆ 32 ಸಾವಿರ ಕೋಟಿಯ ಜಾಕ್'ಪಾಟ್ ಹೊಡೆದಿದೆ. ಬುಧವಾರದಿಂದಲೇ ಅಕೌಂಟ್‌ಗೆ ಬಿತ್ತಾ 2 ಸಾವಿರ ರೂಪಾಯಿ. ತಿಂಗಳಿಗೆ 2 ಸಾವಿರ, ವರ್ಷಕ್ಕೆ 24 ಸಾವಿರ. ಇದು ಲೆಕ್ಕರಾಮಯ್ಯನ 32 ಸಾವಿರ ಕೋಟಿಗಳ ಭರ್ಜರಿ ಲೆಕ್ಕ. ರಾಜ್ಯದಲ್ಲಿ ಕಾಂಗ್ರೆಸ್'ಗೆ(Congress) ಪ್ರಚಂಡ ಗೆಲುವು ತಂದುಕೊಟ್ಟ ಪ್ರಚಂಡ ಅಸ್ತ್ರ. ಕೈ ಪಾಳೆಯಕ್ಕೆ ಚುನಾವಣೆಯಲ್ಲಿ ಸ್ತ್ರೀಶಕ್ತಿಯ ಶ್ರೀರಕ್ಷೆ ಸಿಗುವಂತೆ ಮಾಡಿದ್ದ ಬ್ರಹ್ಮಾಸ್ತ್ರ.. ಅದುವೇ ಗೃಹಲಕ್ಷ್ಮೀ ಗ್ಯಾರಂಟಿ. ಪಂಚಗ್ಯಾರಂಟಿಗಳಲ್ಲಿ ಅತ್ಯಂತ ದೊಡ್ಡ ಪ್ರತಿಜ್ಞೆಯಾಗಿದ್ದ ಗೃಹಲಕ್ಷ್ಮೀ ಯೋಜನೆಗೆ ಕೈ ಸರ್ಕಾರ ಚಾಲನೆ ಕೊಟ್ಟಿದ್ದೆ. ಮೈಸೂರಿನ(Mysore) ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹಲಕ್ಷ್ಮೀ(Gruhalakshmi Yojana) ಚೆಕ್ ಅನಾವರಣಗೊಳಿಸುವ ಮೂಲಕ ಗೃಹಲಕ್ಷ್ಮೀ ಯೋಜನೆಗೆ ಖರ್ಗೆ ಚಾಲನೆ ಕೊಟ್ಟಿದ್ದಾರೆ. ಮಹಿಳಾಮಣಿಗಳಿಂದಲೇ ತುಂಬಿ ತುಳುಕುತ್ತಿದ್ದ ಸಮಾವೇಶ. ಸಮಾವೇಶದ ವೇದಿಕೆಯಲ್ಲಿ ಕಾಂಗ್ರೆಸ್ ದಿಗ್ಗಜರ ದಂಡು. ಎಐಸಿಸಿ ಅಧ್ಯಕ್ಷ ಖರ್ಗೆ, ಕೈ ಅಧಿನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ದಂಡಿ ದಂಡಿ ಕಾಂಗ್ರೆಸ್ ನಾಯಕರು. ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಅಕ್ಷರಶಃ ಹಬ್ಬವಾಗಿಸಿದ ಕೈ ಸರ್ಕಾರ, ತನ್ನ ಪಂಚಗ್ಯಾರಂಟಿಗಳ ಪೈಕಿ 4ನೇ ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತಂದಿದೆ.

ಇದನ್ನೂ ವೀಕ್ಷಿಸಿ:  8 ವರ್ಷದಿಂದ ಶೆಡ್‌ನಲ್ಲೇ ವಾಸ: ಅಧಿಕಾರಿಗಳ ಯಡವಟ್ಟಿಗೆ ಬೀದಿಗೆ ಬಿದ್ದ ಕುಟುಂಬ !