8 ವರ್ಷದಿಂದ ಶೆಡ್‌ನಲ್ಲೇ ವಾಸ: ಅಧಿಕಾರಿಗಳ ಯಡವಟ್ಟಿಗೆ ಬೀದಿಗೆ ಬಿದ್ದ ಕುಟುಂಬ !

ಬಡವರ ಕಣ್ಣೀರು ಒರೆಸಲು ಸರ್ಕಾರ ನೂರಾರು ಯೋಜನೆಗಳನ್ನು ತಂದಿದೆ. ಆದ್ರೆ, ತಲುಪಬೇಕಾದವರಿಗೆ ತಲುಪಿದ್ರೆ ಮಾತ್ರ ಅದಕ್ಕೊಂದು ಪರಿಪೂರ್ಣತೆ ಸಿಗುತ್ತೆ. ನಾವು ನಿಮಗೊಂದು ಸ್ಟೋರಿ ತೋರಿಸ್ತೇವೆ  ಆ ಕುಟುಂಬದ ದುಸ್ಥಿತಿ ನೋಡಿದ್ರೆ ಕಣ್ಣಲ್ಲಿ ರಕ್ತ ಬರುತ್ತೆ. ನಾವು ಇನ್ನೂ ಯಾವ ಕಾಲದಲ್ಲಿ ಇದ್ದೇವೆ ಅನ್ನಿಸುತ್ತೆ...ಇದೇನಾ ಗುಡಿಸಲು ಮುಕ್ತ ಭಾರತ.? ಆ ಬಗೆಗಿನ ಸ್ಪೆಷಲ್ ರಿ ಪೋರ್ಟ್ ಇಲ್ಲಿದೆ ನೋಡಿ.
 

First Published Aug 31, 2023, 3:02 PM IST | Last Updated Aug 31, 2023, 3:02 PM IST

ಆ ಕುಟುಂಬ ತಮಗೊಂದು ಮನೆಬೇಕೆಂದು ಕಳೆದ 8 ವರ್ಷಗಳಿಂದ ಕಾಯ್ತಾನೆ ಇದೆ. ಅಧಿಕಾರಿಗಳು ಮಾಡಿದ ಯಡವಟ್ಟು ಹಾಗೂ ತಾಂತ್ರಿಕ ದೋಷಗಳಿಂದ ಇಲ್ಲಿಯವರೆಗೆ ಆ ಕುಟುಂಬ ತಮ್ಮ ಪಾಲಿಗೆ ದೊರೆಯಬೇಕಾಗಿದ್ದ ಮನೆಯನ್ನು ಕಳೆದುಕೊಂಡಿದೆ. ಹಳೇ ಮನೆ‌ಯ ಜಾಗದಲ್ಲೇ ಕಟ್ಟಿಗೆ ಸಹಾಯದಿಂದ ತೆಂಗಿನ‌ಗರಿ ಮುಚ್ಚಿ, ಟಾರ್ಪಾಲು ಹಾಕಿದ ಶೆಡ್‌ನಲ್ಲೇ ಈ ಬಡ ಕುಟುಂಬ ದಿನದೂಡುತ್ತಿದ್ದು, ತಮಗೆ ಒಂದು ಮನೆ ಕೊಡಿ,‌ ಇಲ್ಲವೇ ಒಂದು ತೊಟ್ಟು ವಿಷ ಕೊಡಿ ಅಂತಾ ಕಣ್ಣೀರಾಕ್ತಿದೆ. 

ಅಧಿಕಾರಿಗಳು ಮಾಡಿದ ಯಡವಟ್ಟು ಹಾಗೂ ತಾಂತ್ರಿಕ‌ ಕಾರಣಗಳಿಂದ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾನಾಯಿ ನಿವಾಸಿ ಲಕ್ಷ್ಮೀ ಶೇಖಪ್ಪ ಚಲವಾದಿ ಕುಟುಂಬ ಕಳೆದ 8 ವರ್ಷಗಳಿಂದ ಶೆಡ್‌ನಲ್ಲಿ ದಿನದೂಡುವ ಪರಿಸ್ಥಿತಿ ಉಂಟಾಗಿದೆ. 8 ವರ್ಷಗಳ ಹಿಂದೆ ಆಶ್ರಯ ಯೋಜನೆಯಡಿ ಮನೆ ದೊರಕಿತ್ತು. ಹಳೇ ಮನೆ ಒಡೆದು ಹಾಕಲು ಕೊಂಚ ತಡವಾಗಿದ್ದ ಕಾರಣವೊಡ್ಡಿ ಮನೆ ನೀಡದ ಪಂಚಾಯ್ತಿ.

ಇದನ್ನೂ ವೀಕ್ಷಿಸಿ: ಎಲಾನ್ ಮಸ್ಕ್ ಮೆಚ್ಚಿದ ಈ ಇಂಡಿಯನ್ ಯಾರು? ಯುಎಸ್‌ನಲ್ಲಿ ಸ್ಥಾಪನೆಯಾಗುತ್ತಾ ವಿವೇಕ ರಾಮರಾಜ್ಯ..?

ಮನೆ ಮಂಜೂರು ಆಗಿದ್ದ  ಮನೆಯ ಎದುರಲ್ಲೇ ಪಂಚಾಯತ್ ಅಧಿಕಾರಿಗಳು ಫೋಟೊ ತೆಗೆದುಕೊಂಡು, ಅದನ್ನೇ ಜಿಪಿಎಸ್‌ನಲ್ಲಿ ನಮೂದಿಸಿ ತೆರಳಿದ್ದರು. ಆ ಬಳಿಕ ಪಂಚಾಯತ್ ಅಧಿಕಾರಿಗಳ ಸಮ್ಮುಖದಲ್ಲೇ ಈ ಕುಟುಂಬದ ಹಳೇ ಮನೆಯನ್ನು ಒಡೆಯಲಾಗಿತ್ತು ಎಂದು ಹೇಳಲಾಗಿದೆ. ಯಾವಾಗ ಮನೆಯನ್ನು ಸಂಪೂರ್ಣ ಒಡೆಯಲಾಯ್ತೋ ಅಧಿಕಾರಿಗಳು ಬಂದು ನಿಮಗೆ ಮನೆ ದೊರೆಯುವ ಪ್ರಕ್ರಿಯೆ ‘ನಾಟ್ ಓಕೆ’ ಆಗಿದೆ. ಮುಂದಿನ‌ ಬಾರಿ ಕಾಯಬೇಕು ಎಂದು‌ ಉತ್ತರ ನೀಡಿ ಈ ಕುಟುಂಬದ ಆಸೆಗೆ ತಣ್ಣೀರು ಎರಚಿದ್ದಾರೆ. 

ಇನ್ನು ಹಳೇ ಪಿಡಿಒ ಅಂತೂ ಮನೆ ನಿರ್ಮಾಣ ಪ್ರಕ್ರಿಯೆ ಬಾಕಿಯಿದೆ ಎಂದು ರಾಜೀವ ಗಾಂಧಿ ಹೌಸಿಂಗ್ ಬೋರ್ಡ್ ವೆಬ್‌ಸೈಟ್‌ನಲ್ಲಿ ನಮೂದಿಸುವ ಬದಲು ಪಂಚಾಂಗ, ಲಿಂಟಲ್ ಕಾರ್ಯಗಳ ಫೋಟೊಗಳನ್ನು ಅಪ್‌ಲೋಡ್ ಮಾಡುವ ಸ್ಥಳದಲ್ಲೇ ಹಳೇ ಮನೆಯ ಫೋಟೋವನ್ನು ಮೂರು ಬಾರಿ ಅಪ್‌ಲೋಡ್ ಮಾಡಿ ಕೆಲಸ ಪೂರ್ಣಗೊಂಡಿದೆ ಎಂದು ತೋರಿಸುವಂತೆ ಮಾಡಿಕೊಂಡು ತೆರಳಿದ್ದಾರೆ. ಮನೆ ನಿರ್ಮಾಣಕ್ಕೆ ಹಂತ ಹಂತವಾಗಿ ಹಣವೇ ಬಿಡುಗಡೆಯಾಗಿರದಿದ್ರೂ ಹಳೇ ಪಿಡಿಒ ಮಾಡಿದ ಯಡವಟ್ಟಿನಿಂದ ಈ ಕುಟುಂಬ ಸರಕಾರದಿಂದ ದೊರೆಯುವ ಮನೆಯನ್ನೇ ಕಳೆದುಕೊಳ್ಳುವಂತಾಗಿದೆ.

Video Top Stories