Asianet Suvarna News Asianet Suvarna News

ಮದರಾಸ ಶಿಕ್ಷಣದ ಮೇಲೆ ಸರ್ಕಾರದ ಕಣ್ಣು

ಮದರಸಾದಲ್ಲಿ ಬೇರೆ ಶಿಕ್ಷಣ ಸಂಸ್ಥೆಗಳಂತೆ ಇತರೆ ಶಿಕ್ಷಣ ಕಲಿಸುವುದು ಕಡ್ಡಾಯವಾಗಿದೆ. ಆದರೆ ಇತರೆ ಪಾಠಗಳಿಂದ ಮಕ್ಕಳು ವಂಚನೆಗೆ ಒಳಗಾಗಿದ್ದು, ಇದು ಸರ್ಕಾರದ ಗಮನಕ್ಕೆ ಬಂದಿದೆ.

First Published Oct 12, 2022, 2:08 PM IST | Last Updated Oct 12, 2022, 2:25 PM IST

ಮದರಸಾ ಶಿಕ್ಷಣದಲ್ಲಿ ಹೇಳುವುದು ಒಂದು ರೀತಿ ಮಾಡುವುದು ಇನ್ನೊಂದು ರೀತಿ ಎನ್ನುವಂತಾಗಿದೆ. ದಾಖಲೆಯಷ್ಟು ವಿದ್ಯಾರ್ಥಿಗಳು ಮದರಸಾದಲ್ಲಿ ಹಾಜರಾಗುತ್ತಿಲ್ಲವಾಗಿದ್ದು,ಇದು ಇಲಾಖೆಯ ಗಮನಕ್ಕೆ ಬಂದಿದೆ. ಇನ್ನು ಶಿಕ್ಷಣ ಸಚಿವರಿಗೆ ಮದರಸಾ ಕುರಿತು ಮೌಖಿಕ ಮಾಹಿತಿ ಲಭ್ಯವಾಗಿದ್ದು,ಧಾರವಾಡ ಮತ್ತು ಕಲಬುರಗಿ ವಿಭಾಗ ಆಯುಕ್ತರಿಂದ ಮಾಹಿತಿ ಒದಗಿದೆ.ಅದಲ್ಲದೆ ಮೂರು ಸಾವಿರಕ್ಕೂ ಹೆಚ್ಚು ಅನುದಾನ ರಹಿತ ಮದರಸಾ ಶಾಲೆಗಳಿದ್ದು, ಇವುಗಳನ್ನು ಎನ್ ಇ ಪಿ(New Education Policy) ಆಧಾರ ಅಡಿ ಏಕರೂಪ ಶಿಕ್ಷಣಕ್ಕೆ ಚಿಂತನೆ ಮಾಡಲಾಗುತ್ತಿದೆ. ಹಾಗೆ ಮದರಸಾದಲ್ಲಿ ಕೇವಲ ಧಾರ್ಮಿಕ ಆಚರಣೆಗಳನ್ನು ಬೋಧಿಸಲಾಗುತ್ತಿದ್ದು, ಸರ್ಕಾರದ ಮಾತುಗಳನ್ನು ಕೇಳದಿದ್ದರೆ ಇಲಾಖೆಯು ಮದರಸಾ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಟೀಲ್‌ ಆರೋಪ ಗಂಭೀರವಾಗಿ ಪರಿಗಣಿಸುವ ಹಾಗಿಲ್ಲ: ಮಾಜಿ ಸಚಿವ ಎಂ.ಬಿ.ಪಾಟೀಲ