Asianet Suvarna News Asianet Suvarna News

Covid Vaccine ಕಂಡು ಎದ್ನೋ ಬಿದ್ನೋ ಅಂತ ಓಡಿದ ರೈತರು..!

*  ವೈರಸ್ ಕಟ್ಟಿಹಾಕಲು ರಾಜ್ಯ ಸರ್ಕಾರ ಸನ್ನದ್ಧ
*  ಒಮಿಕ್ರಾನ್ ವೈರಸ್‌ ಪತ್ತೆಯಾದರೆ ರಾಜ್ಯದಲ್ಲಿ ಟಫ್‌ ರೂಲ್ಸ್‌ ಜಾರಿ 
*  ಕೋವಿಡ್‌ ಟೆಸ್ಟ್‌ಗೆ ಹೆದರಿ ಕಳ್ಳದಾರಿಯಲ್ಲಿ ಓಡಿದ ಜನ
 

ಬೆಂಗಳೂರು(ಡಿ.02):  ಒಮಿಕ್ರಾನ್ ವೈರಸ್‌ ವಿಶ್ವಾದ್ಯಂತ ವೇಗವಾಗಿ ಹಬ್ಬುತ್ತಿದೆ. ಹೀಗಾಗಿ ಈ ವೈರಸ್ಅನ್ನ ಕಟ್ಟಿಹಾಕಲು ರಾಜ್ಯ ಸರ್ಕಾರ ಕೂಡ ಸನ್ನದ್ಧವಾಗಿದೆ. ಒಮಿಕ್ರಾನ್ ವೈರಸ್‌ ಪತ್ತೆಯಾದರೆ ರಾಜ್ಯದಲ್ಲಿ ಟಫ್‌ ರೂಲ್ಸ್‌ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್. ಅಶೋಶ್‌ ತಿಳಿಸಿದ್ದಾರೆ. 

* ಒಮಿಕ್ರಾನ್ ಕಾಟ ಹೆಚ್ಚಿರುವ ಆಫ್ರಿಕಾದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಕ್ಕೆ ಆಗಮಿಸಿದ ಇಬ್ಬರನ್ನ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಇಬ್ಬರಿಗೂ ಕೋವಿಡ್‌ ಟೆಸ್ಟ್‌ ಮಾಡಿಸಲಾಗಿದ್ದು  ನೆಗೆಟಿವ್‌ ವರದಿ ಬಂದಿದೆ. ಆದರೂ ಕೂಡ ಇಬ್ಬರನ್ನೂ  ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

VIRAL NEWS : ಮೇಲಿಂದ ಕೆಳಕ್ಕೆ ಬಿತ್ತು ನವಜೋಡಿ - ವಿಡಿಯೋ ವೈರಲ್

* ವ್ಯಾಕ್ಸಿನ್‌ ಕೊಡೋಕೆ ಬಂದಾಗ ಎದ್ನೋ ಬಿದ್ನೋ ಅಂತ ರೈತರು ಓಡಿಹೋದ ಘಟನೆ ಯಾದಗಿರಿ ತಾಲೂಕಿನ ಮದ್ನಾಳ ಗ್ರಾಮದಲ್ಲಿ ನಡೆದಿದೆ. ಲಸಿಕೆ ನೀಡಲು ಬಂದಿದ್ದನನ್ನ ಕಂಡ ರೈತರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ.

* ಕೋವಿಡ್‌ ಟೆಸ್ಟ್‌ಗೆ ಹೆದರಿ ಜನರು ಕಳ್ಳದಾರಿಯಲ್ಲಿ ಓಡಿದ ಘಟನೆ ಗದಗ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮುಂಬೈನಿಂದ ರೈಲಿನಿಂದ ಬಂದ ಪ್ರಯಾಣಿಕರು ಸಿಬ್ಬಂದಿ ಕಣ್ತಪ್ಪಿಸಿ ಎಸ್ಕೇಪ್‌ ಆಗಿದ್ದಾರೆ. ಪ್ರಯಾಣಿಕರಿಗೆ  ಕೋವಿಡ್‌ ಟೆಸ್ಟ್‌ ಮಾಡಲು ಆರೋಗ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.