Asianet Suvarna News Asianet Suvarna News

ಕೃಷಿ ಬಿಲ್‌ಗೆ ವಿರೋಧ: ಶಾಂತಿಯುತ ಕರ್ನಾಟಕ ಬಂದ್‌ಗೆ ರೈತ ಮುಖಂಡರ ಮನವಿ

ಶಾಂತಿಯುತ ಬಂದ್‌ ರೈತ ಪರ ಸಂಘಟನೆಗಳ ಕರೆ|  ಬೆಳಿಗ್ಗೆ 6ರಿಂದ ಸಂಜೆ 6 ರವರೆಗೆ ಬಂದ್‌| ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬೃಹತ್‌ ಪ್ರತಿಭಟನೆ| 

ಬೆಂಗಳೂರು(ಸೆ.27): ಕೃಷಿ ಬಿಲ್‌ ವಿರೋಧಿಸಿ ನಾಳೆ(ಸೋಮವಾರ) ಕರ್ನಾಟಕ ಬಂದ್‌ ಆಗಲಿದೆ. ಬೆಳಿಗ್ಗೆ 6ರಿಂದ  ಸಂಜೆ 6 ರವರೆಗೆ ಬಂದ್‌ ಮಾಡಲು ವಿವಿಧ ಸಂಘಟನೆಗಳು ತೀರ್ಮಾನಿಸಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. 

ಡ್ರಗ್ಸ್ ಕೇಸಲ್ಲಿ ಸಿಲುಕಿರುವ ಅನುಶ್ರೀಗೆ ಮತ್ತೊಂದು ಆತಂಕ!

ರಾಜಧಾನಿ ಬೆಂಗಳೂರಿನಲ್ಲಿ ಬೃಹತ್‌ ಜಾಥಾ ನಡೆಯಲಿದೆ. ರಾಜ್ಯಾದ್ಯಂತ ಶಾಂತಿಯುತ ಬಂದ್‌ಗೆ ರೈತಪರ ಸಂಘಟನೆಗಳು ಕರೆ ನೀಡಿವೆ. ಬಂದ್‌ ವೇಳೆಯಲ್ಲಿ ಅಗತ್ಯ ವಸ್ತುಗಳನ್ನ ಹೊರತು ಪಡಿಸಿದ ಎಲ್ಲ ತರಹದ ವ್ಯಾಪಾರ ವಹಿವಾಟು ಬಂದ್‌ ಆಗಲಿದೆ.