Asianet Suvarna News Asianet Suvarna News

ಡ್ರಗ್ಸ್ ಕೇಸಲ್ಲಿ ಸಿಲುಕಿರುವ ಅನುಶ್ರೀಗೆ ಮತ್ತೊಂದು ಆತಂಕ!

ಆಂಕರ್ ಕಂ ನಟಿ ಅನುಶ್ರೀಗೆ ಹೊಸ ಭಯವೊಂದು ಶುರುವಾಗಿದೆ. ಅನುಶ್ರೀ ಮಾದಕ ವಸ್ತು ಸೇವಿಸ್ತಿದ್ರಾ? ಇಲ್ವಾ? ಎಂದು ತಿಳಿಯಲು ಡೋಪಿಂಗ್ ಟೆಸ್ಟ್ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬೆಂಗಳೂರು(ಸೆ.27) ಆಂಕರ್ ಕಂ ನಟಿ ಅನುಶ್ರೀಗೆ ಹೊಸ ಭಯವೊಂದು ಶುರುವಾಗಿದೆ. ಅನುಶ್ರೀ ಮಾದಕ ವಸ್ತು ಸೇವಿಸ್ತಿದ್ರಾ? ಇಲ್ವಾ? ಎಂದು ತಿಳಿಯಲು ಡೋಪಿಂಗ್ ಟೆಸ್ಟ್ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈಗಾಗಲೇ ಡ್ರಗ್ಸ್ ಪ್ರಕರಣ ಸಂಬಂಧ ಅನುಶ್ರೀ ಸಿಸಿಬಿ ವಿಚಾರಣೆಗೊಳಪಟ್ಟಿದ್ದಾರೆ. ವಿಚಾರಣೆ ಮುಗಿದ ಬಳಿಕ ಕೊಂಚ ನೆಮ್ಮದಿಯಿಂದ ಇದ್ದ ಅನುಶ್ರೀಗೆ ಈಗ ಡೋಪಿಂಗ್ ಟೆಸ್ಟ್ ವಿಚಾರ ಮತ್ತೆ ತಲೆನೋವು ಕೊಟ್ಟಿದೆ.

ಕಮಿನರ್ ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದೇ ಈ ಟೆಸ್ಟ್ ಮಾಡುವ ಅನುಮಾನ ಹುಟ್ಟು ಹಾಕಿದೆ.