Asianet Suvarna News Asianet Suvarna News

ಬೆಂಗಳೂರು ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಅನಾವರಣ..!

ಕೊರೋನಾ ಪಾಸಿಟಿವ್ ಆಗಿರುವಂತಹ ರೋಗಿಗಳ ಪಾಡು ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. ಕೊರೋನಾ ಸೋಂಕಿತರು ಸ್ಫೋಟಕ ಸತ್ಯವನ್ನು ಹೊರಹಾಕಿದ್ದಾರೆ. ಇಬ್ಬರು ಕೊರೋನಾ ಸೋಂಕಿತ ಸಹೋದರಿಯರ ಕಥೆ ಇದು.

ಬೆಂಗಳೂರು(ಜೂ.27): ಒಂದು ಕಡೆ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಮತ್ತೊಂದೆಡೆ ಕೋವಿಡ್ ಆಸ್ಪತ್ರೆಗಳ ಅವ್ಯವಸ್ಥೆ ಬೆಳಕಿಗೆ ಬರುತ್ತಿದೆ. ಸುವರ್ಣ ನ್ಯೂಸ್ ಅಂತಹದ್ದೊಂದು ಎಕ್ಸ್‌ಕ್ಲೂಸಿವ್ ಸ್ಟೋರಿಯನ್ನು ರಾಜ್ಯದ ಜನತೆಯ ಮುಂದೆ ತೆರೆದಿಟ್ಟಿದೆ.

ಕೊರೋನಾ ಪಾಸಿಟಿವ್ ಆಗಿರುವಂತಹ ರೋಗಿಗಳ ಪಾಡು ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. ಕೊರೋನಾ ಸೋಂಕಿತರು ಸ್ಫೋಟಕ ಸತ್ಯವನ್ನು ಹೊರಹಾಕಿದ್ದಾರೆ. ಇಬ್ಬರು ಕೊರೋನಾ ಸೋಂಕಿತ ಸಹೋದರಿಯರ ಕಥೆ ಇದು.

ಕೊರೋನಾ ವೈರಸ್ ತಡೆಯಲು ನೆಕ್ಲೇಸ್ ಬಿಡುಗಡೆ ಮಾಡಿದ ನಾಸಾ!

ಹೌದು, ಜೂನ್ 25ರಂದು ಕೊರೋನಾ ಟೆಸ್ಟ್ ಮಾಡಲಾಗಿತ್ತು. ಜೂನ್ 26ರಂದು ಬಂದ ರಿಪೋರ್ಟ್‌ನಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಬಗ್ಗೆ ಯುವತಿಯರಿಬ್ಬರಿಗೆ ಕರೆ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳು ನಿಮ್ಮನ್ನು ಕರೆದೊಯ್ಯುತ್ತೇವೆ ಎಂದಿದ್ದರು. ಆದರೆ ಈವರೆಗೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಲ್ಲ. ಬೇಸತ್ತು ಯುವತಿಯರೇ ಆಸ್ಪತ್ರೆಗೆ ಬಂದಿದ್ದಾರೆ. ಸತತ 9 ಗಂಟೆಯಿಂದ ಆಸ್ಪತ್ರೆಯ ಬಳಿಯೇ ನಿಂತಿದ್ದಾರೆ. ಅವರನ್ನು ಅಡ್ಮಿಟ್ ಮಾಡಿಕೊಳ್ತಾಯಿಲ್ಲ. ಅಲ್ಲಿ ಹೋಗಿ, ಇಲ್ಲಿ ಹೋಗಿ ಎಂದು ಸಿಬ್ಬಂದಿಗಳು ಅಲೆಡಾಡಿಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.