Asianet Suvarna News Asianet Suvarna News

IMA Scam: ಹಳ್ಳ ಹಿಡಿದ ಹಗರಣದ ತನಿಖೆ, ಮನ್ಸೂರ್‌ ಖಾನ್‌ನಿಂದ DySP ಗಳಿಗೆ ಲಂಚ

ಕರ್ನಾಟಕದ ಅತೀ ದೊಡ್ಡ ಹಗರಣ ಐಎಂಎ ಹಗರಣ (IMA Scam) ಎಲ್ಲಿಗೆ ಬಂತು..? ಎಕ್ಸ್‌ಕ್ಲೂಸಿವ್ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಜ್ಯ ಸರ್ಕಾರಕ್ಕೆ 2 ತಿಂಗಳ ಹಿಂದೆ ಸಿಬಿಐ (CBI) ವರದಿ ನೀಡಿತ್ತು. ವರದಿ ನೀಡಿ 2 ತಿಂಗಳಾದರೂ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಎದುರಾಗಿದೆ. 

 

ಬೆಂಗಳೂರು (ಜ. 30): ಕರ್ನಾಟಕದ ಅತೀ ದೊಡ್ಡ ಹಗರಣ ಐಎಂಎ ಹಗರಣ (IMA Scam) ಎಲ್ಲಿಗೆ ಬಂತು..? ಎಕ್ಸ್‌ಕ್ಲೂಸಿವ್ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಜ್ಯ ಸರ್ಕಾರಕ್ಕೆ 2 ತಿಂಗಳ ಹಿಂದೆ ಸಿಬಿಐ (CBI) ವರದಿ ನೀಡಿತ್ತು. ವರದಿ ನೀಡಿ 2 ತಿಂಗಳಾದರೂ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಎದುರಾಗಿದೆ. 

ಈ ಕೇಸ್ ಮುಚ್ಚಿಹಾಕಲು ಮನ್ಸೂರ್ ಖಾನ್‌ನಿಂದ ಈಗ ISD ಡಿವೈಎಸ್‌ಪಿ ಆಗಿರೋ ಅಂದಿನ ಸಿಸಿಬಿ ಇನ್ಸ್‌ಪೆಕ್ಟರ್ ಯತಿರಾಜ್, ಈಗ ಬೆಸ್ಕಾಂ DySP ಆಗಿರೋ ಅಂದಿನ ಸಿಸಿಬಿ ಎಸಿಪಿ ಮಂಜುನಾಥ್, ಮುಳಬಾಗಿಲು DySP ಆಗಿರೋ ಅಂದಿನ ಸಿಸಿಬಿ ಇನ್ಸ್‌ಪೆಕ್ಟರ್ ಕೆ ಸಿ ಗಿರಿ ತಲಾ 25 ಲಕ್ಷ ಲಂಚ ಪಡೆದಿದ್ದಾರೆ ಎನ್ನಲಾಗಿದೆ. 

Video Top Stories