ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಸಹಯೋಗ: ಇವಿ ಎಕ್ಸಪೋ‌ ಪವರ್ ಡ್ರೈವ್ ಆರಂಭ

ಎಲೆಕ್ಟ್ರಿಕ್ ವಾಹನ ಕೊಳ್ಳಬೇಕು ಅನ್ನೋರಿಗೆ ಭರಪೂರ ಆಯ್ಕೆಯೊಂದಿಗೆ , ಎಲೆಕ್ಟ್ರಿಕ್ ವಾಹನಗಳು ಹಾಗೂ ವಾಹನಗಳ ಬಿಡಿ ಭಾಗಗಳ ಬಗ್ಗೆ ಮಾಹಿತಿ,  ಟ್ರಯಲ್‌ ರೈಡ್ ಒದಗಿಸೋ ಇವಿ ಎಕ್ಸಪೋ ಶುರುವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ನಡೆಯುತ್ತಿರುವ ಇವಿ ಎಕ್ಸ್ ಪೋ ಮೂರು ದಿನಗಳ ಕಾಲ ನಡೆಯಲಿದೆ.
 

First Published Aug 26, 2023, 3:48 PM IST | Last Updated Aug 26, 2023, 3:48 PM IST

ಸದಾ ಹೊಸತನಕ್ಕೆ ಹೆಸರಾದ ಏಷ್ಯಾನೆಟ್ ಸುವರ್ಣ ‌ನ್ಯೂಸ್ - ಕನ್ನಡಪ್ರಭವು ಮಾಧ್ಯಮ ಲೋಕದಲ್ಲೇ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ವಾಹನಗಳ ಎಕ್ಸಪೋ‌ ಪವರ್ ಡ್ರೈವ್ (EV Expo Power Drive) ಆಯೋಜಿಸಿದೆ. ಮೂರು ದಿನಗಳ ಈ ಎಕ್ಸಪೋವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತಾ‌ ತಿಮ್ಮಯ್ಯ ಉದ್ಘಾಟಿಸಿದರು. ಪರಿಸರ ಸ್ನೇಹಿ ಇವಿ ಎಕ್ಸ್ ಪೋ(EV EXpo) ಹೊಸ ಜಾಗತಿಕ ಕಾರ್ಯಕ್ರಮವಾಗಿದ್ದು, ಜನರು ಈ ಕಾರ್ಯಕ್ರಮದ ಅನುಕೂಲ ಪಡೆದು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸ ಬೇಕು. ಈ ಮೂಲಕ ಪರಿಸರಕ್ಕೆ ನಮ್ಮ ಕೊಡುಗೆಯನ್ನು ನೀಡ ಬೇಕೆಂದು ತಿಳಿಸಿದ್ರು. 60 ಕ್ಕೂ ಹೆಚ್ಚು ಕಂಪನಿಗಳ 3 ಸಾವಿರಕ್ಕೂ ಹೆಚ್ಚು ಬಗೆಯ ವಾಹನಗಳು ಹಾಗೂ ಅದರ ಸಂಬಂಧಿ ಸೇವೆಗಳ‌ ಮಾಹಿತಿ ಪವರ್ ಡ್ರೈವ್ ನಲ್ಲಿ ದೊರೆಯುತ್ತಿದೆ. ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ನಡೆಯುವ ಎಕ್ಸಪೋ ಉದ್ಘಾಟನೆ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಭಾಗವಹಿಸಿ, ಇಷ್ಟದ ಇವಿ ವೆಹಿಕಲ್ ನಲ್ಲಿ ಟೆಸ್ಟ್‌ ಡ್ರೈವ್ ಮಾಡಿದ್ರು. ಟೂ ವೀಲರ್, ಕಾರು, ಆಟೋ ಹಾಗೂ ಬಗೆ ಬಗೆಯ ಎಲೆಕ್ಟ್ರಿಕ್ ಗೂಡ್ಸ್ ವಾಹನಗಳು ಎಕ್ಸ್ ಪೋದಲ್ಲಿ ಗಮನ ಸೆಳೆಯುತ್ತಿವೆ. ಎಕ್ಸಪೋದಲ್ಲಿ ಭಾಗವಹಿಸುವವರಿಗೆ ಬಂಪರ್ ಬಹುಮಾನ ಗೆಲ್ಲುವ ಅವಕಾಶವು ಉಂಟು. 

ಇದನ್ನೂ ವೀಕ್ಷಿಸಿ:  ಆತ JCB ಡ್ರೈವರ್..ಈಕೆ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸದಾಕೆ: ಅವನನ್ನ ಪ್ರೀತಿಸಿದ್ದೇ, ಆಕೆ ಮಾಡಿದ ಮೊದಲ ತಪ್ಪು..!