Asianet Suvarna News Asianet Suvarna News

ಜಮೀರ್ ನಿವಾಸದಲ್ಲಿ ಸತತ 23 ಗಂಟೆಗಳ ಕಾಲ ಪರಿಶೀಲನೆ, ಅಗತ್ಯ ಮಾಹಿತಿಗಳೊಂದಿಗೆ ಇಡಿ ವಾಪಸ್

Aug 6, 2021, 9:31 AM IST

ಬೆಂಗಳೂರು (ಆ. 06): ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸಕ್ಕೆ ಗುರುವಾರ ಬೆಳಿಗ್ಗೆ 5.45 ರ ಸುಮಾರಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀರ್‌ಗೆ ಸೇರಿದ 6 ಸ್ಥಳಗಳ ಮೇಲೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. 

ಜಮೀರ್ ಮೇಲೆ 'ಆಕ್ರಮಣ': ಇ.ಡಿ ದಾಳಿಯ ಹಿಂದಿನ ಕಾರಣ ಮತ್ತು ರಾಜಕಾರಣ

ದೆಹಲಿಯಿಂದ ಆಗಮಿಸಿದ್ದ 45 ಕ್ಕೂ ಹೆಚ್ಚು ಅಧಿಕಾರಿಗಳ ತಂಡ 23 ತಾಸುಗಳ ವಿಚಾರಣೆ ನಡೆಸಿದೆ. ಭದ್ರತೆಗಾಗಿ ಸ್ಥಳೀಯ ಪೊಲೀಸರು ಹಾಗೂ ಸಿಆರ್‌ಪಿಎಫ್ ಪೊಲೀಸರ ನೆರವು ಪಡೆದಿದ್ದಾರೆ.