Asianet Suvarna News Asianet Suvarna News

'ನನಗೆ ಕೋವಿಡ್ ಸೋಂಕು ದೃಢಪಡಲು ಬಿಬಿಎಂಪಿಯೇ ಕಾರಣ': ಅಧಿಕಾರಿಯಿಂದ ಆಕ್ರೋಶ

ಖಾಸಗಿ ಆಸ್ಪತ್ರೆಗಳ ನಡೆಯಿಂದ ಬೇಸತ್ತ ಬಿಬಿಎಂಪಿ ಮಹಿಳಾ ಅಧಿಕಾರಿ, ಬಿಬಿಎಂಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಜು. 14): ಖಾಸಗಿ ಆಸ್ಪತ್ರೆಗಳ ನಡೆಯಿಂದ ಬೇಸತ್ತ ಬಿಬಿಎಂಪಿ ಮಹಿಳಾ ಅಧಿಕಾರಿ, ಬಿಬಿಎಂಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೊದಲು ಇವರಿಗೆ ಕೊರೊನಾ ಇರಲಿಲ್ಲ. ಬರೀ ಚಳಿ, ಜ್ವರ ಮಾತ್ರವಿತ್ತು. ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿ 6 ದಿನ ಅಲೆದಾಡಿಸಿದ್ದಾರೆ. ಕೊನೆಗೆ ಕೊರೊನಾ ಸೋಂಕು ದೃಢಪಟ್ಟಿದೆ. 'ಚಿಕಿತ್ಸೆಗೆಂದು ಹೋದರೆ ನಮ್ಮಲ್ಲಿ ಬೆಡ್‌ ಇಲ್ಲ. ಅಲ್ಲಿ ಹೋಗಿ, ಇಲ್ಲಿ ಹೋಗಿ ಅಂತ ಅಲೆದಾಡಿಸುತ್ತಿದ್ದಾರೆ' ಎಂದು ಬಿಬಿಎಂಪಿ ಜೆಪಿ ನಗರ ವಿಭಾಗದ ARO ಕಣ್ಣೀರು ಹಾಕಿದ್ದಾರೆ. 

ಇಷ್ಟಕ್ಕೆಲ್ಲಾ ಬಿಬಿಎಂಪಿ ವರ್ತನೆಯೇ ಕಾರಣ. ಜ್ವರದಲ್ಲೇ ಅಲೆದು ಅಲೆದು ವೀಕ್ನೆಸ್ ಆಯ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊರೊನಾ ನಿರ್ವಹಣೆಯಲ್ಲಿ ಬಿಬಿಎಂಪಿ ನಂಬಿಕೊಂಡ್ರೆ ಅಷ್ಟೇ: ಹೈಕೋರ್ಟ್‌ ಕಿಡಿ

Video Top Stories